ಚಳ್ಳಕೆರೆ: ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಭಾರೀ ಬಿರುಗಾಳಿ ಅಪ್ಪಳಿಸಿದ ಪರಿಣಾಮ ಫಸಲಿಗೆ ಬಂದಿದ್ದ ಪರಂಗಿ(ಪಪ್ಪಾಯ) ಬೆಳೆ ನಷ್ಟವಾಗಿರುವ ಘಟನೆ ನಡೆದಿದೆ.
ತಾಲೂಕಿನ ಹುಲಿಕುಂಟೆ ಗ್ರಾಮದ ತಿಪ್ಪೇಸ್ವಾಮಿ ಎನ್ನುವ ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ ಪರಂಗಿ ಬೆಳೆ ಭಾನುವಾರ ಬೀಸಿದ ಗಾಳಿಗೆ ನಾಶವಾಗಿದೆ.
ಸುಮಾರು ಎರಡು ನಾಲ್ಕು ಎಕರೆ ಜಮೀನಿನಲ್ಲಿ ಬೆಳದ ಫಸಲಿಗೆ ಬಂದಿದ್ದ ಪರಂಗಿ ಇನ್ನು ಎರಡು ದಿನದಲ್ಲಿ ಮಾರಾಟವಾಗಬೇಕಿತ್ತು. ಆದರೆ ರಾತ್ರಿ ಬೀಸಿದ ಬಿರುಗಾಳಿಗೆ ಪರಂಗಿ ನೆಲಕ್ಕೆ ಬಿದ್ದಿದ್ದು ನಷ್ಟವಾಗಿದೆ.
ಹಾಗೆ ಹುಲಿಕುಂಟೆ ಗ್ರಾಮದ ತಿಪ್ಪೇಸ್ವಾಮಿ ಎನ್ನುವ ರೈತ ಸುಮಾರು ನಾಲ್ಕು ಎಕರೆಯಲ್ಲಿ ಎರಡು ಲಕ್ಷ ಹಣ ತೊಡಗಿಸಿ ಪರಂಗಿ ಬೆಳಸಿದ್ದು ಮೊದಲು ಕಟಿಂಗ್’ನಲ್ಲಿ ಕೆಜಿಗೆ 15 ರೂಪಾಯಿಯಂತೆ ಮಾರಾಟ ಮಾಡಲಾಗಿತ್ತು. ಇನ್ನು ಈ ಬೆಳೆ ಕೆಜಿಗೆ 16 ರೂಪಾಯಿಯಂತೆ ಮಾರಾಟ ಮಾಡಲು ಮುಂಗಡ ಹಣ ಕೊಟ್ಟಿದ್ದರು. ಆದರೆ ಭಾನುವಾರ ರಾತ್ರಿ ಬೀಸಿದ ಬಿರುಗಾಳಿಗೆ ಕೈಗೆ ಬಂದ ಫಸಲು ನೆಲ ಕಚ್ಚಿದೆ. ಸುಮಾರು ನಾಲ್ಕರಿಂದ ಐದು ಲಕ್ಷ ರೂ.ಗಳಷ್ಟು ಬೆಳೆ ನಷ್ಟವಾಗಿದೆ.
ಪರಂಗಿ ತೋಟಕ್ಕೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಭೇಟಿ ನೀಡಿದ್ದಾರೆ. ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇನ್ನು, ಜಡೆಕುಂಟೆ ಗ್ರಾಮದಲ್ಲಿ ಗೊನೆ ಬಿಟ್ಟಿದ್ದ ಬಾಳೆ ಗಾಳಿಗೆ ನೆಲಕ್ಕೆ ಬಿದ್ದಿದೆ.
ತಾಲೂಕಿನ ಜಡೆಕುಂಟೆ ಗ್ರಾಮದ ಷಡಾಕ್ಷರಿ ಎನ್ನುವ ರೈತರ ಜಮೀನಿನಲ್ಲಿ ಫಸಲಿಗೆ ಬಂದಿದ್ದ ಸುಮಾರು ಎರಡು ಎಕರೆಯಲ್ಲಿ ಬೆಳೆದ ಬಾಳೆ ರಾತ್ರಿ ಬೀಸಿದ ಬಿರುಗಾಳಿಗೆ ನಾಶವಾಗಿದೆ.
ಇದರಿಂದ ಸುಮಾರು 1.50 ರಿಂದ 2 ಲಕ್ಷದಷ್ಟು ನಷ್ಟವಾಗಿದೆ. ಸ್ಥಳಕ್ಕೆ ತೋಟಗಾರಿಕೆ ಸಹಾಯಕ ನಿರ್ದೇಶಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post