ಕಲ್ಪ ಮೀಡಿಯಾ ಹೌಸ್ | ತಿರುಮಲ |
ಕಲಿಯುಗದ ಕರುಣಾಮಯಿ ಶ್ರೀ ವೆಂಕಟೇಶ ನು ಸಕಲ ಜನರ ಸಂಕಟಗಳನ್ನು ಪರಿಹರಿಸಲಿ ಎಂದು ಭಂಮಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ತಿರುಮಲದಲ್ಲಿ ಟಿಟಿಡಿ ಗೌರವಾಧರಗಳೊಡನೆ ತಿಮ್ಮಪ್ಪನ ದರುಶನ ಪಡೆದು ಅವರು ಆಶೀರ್ವಚನ ನೀಡಿದರು.
ಕಲ್ಪದೃಮನಾದವನ ಕೃಪಾ ನೆರಳು ನಮ್ಮೆಲ್ಲರ ಮೇಲಿದ್ದರೆ ಉನ್ನತೋನ್ನತ ಸಾಧನೆ ಸಾಧ್ಯ. ಹಾಗಾಗಿ ಎಲ್ಲರೂ ಕಲಿಯುಗದ ಕರುಣಾನಿಧಿ ಯನ್ನು ಆರಾಧಿಸೋಣ ಎಂದರು.
ಕಾಂಚನ ಬ್ರಹ್ಮ ಎನಿಸಿದ ಶ್ರೀ ನಿವಾಸನು ಅನ್ನಬ್ರಹ್ಮನಾಗಿಯೂ, ಶ್ರೋತೃಗಳ ಕಿವಿಗೆ ತನ್ನ ನಾದದಿಂದ ನಾದ ಬ್ರಹ್ಮ ನಾಗಿಯೂ ಪ್ರಖ್ಯಾತನಾಗಿದ್ದಾನೆ. ಪ್ರತಿಕ್ಷಣ ಆತನ ಸ್ಮರಣೆ ಎಲ್ಲರಿಗೂ ಜ್ಞಾನ, ಭಕ್ತಿ ಮತ್ತು ವೈರಾಗ್ಯ ಕರುಣಿಸಲಿ ಎಂದರು.
Also read: ದೇವಸ್ಥಾನಗಳಲ್ಲಿ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಮೂವರ ಬಂಧನ
ಬೆಂಗಳೂರಿನ ಗಿರಿನಗರದ ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಮಂಗಳವಾರ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಯ ಸಕಲ ಗೌರವಾಧರಗಳೊಡನೆ ತಿರುಮಲದಲ್ಲಿ ಶ್ರೀ ವೆಂಕಟೇಶ್ವರನ ದರುಶನ ಪಡೆದರು. ನಾಸಾದ ವಿಜ್ಞಾನಿ ಶ್ರೀ ನಿವಾಸ ರಾಮಚಂದ್ರ, ಬಿರ್ಲಾ ಸಿಮೆಂಟ್ಸ್ ಕಂಪನಿ ಉಪಾಧ್ಯಕ್ಷ ಹೈದರಾಬಾದ್ ಶ್ರೀನಿವಾಸನ್, ಹಿರಿಯ ಉದ್ಯಮಿಗಳಾದ ನಾಗೇಂದ್ರ, ಮಧುರಾನಾಥ, ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಸತ್ಯಧ್ಯಾನಾಚಾರ್ಯ ಕಟ್ಟಿ ಮತ್ತು ಟಿಟಿಡಿ ಅಧಿಕಾರಿಗಳು ಇದ್ದರು.
ನಂತರ ತಿರುಮಲದ ಶ್ರೀ ಪೇಜಾವರ ಮಠದಲಿ ಸಂಸ್ಥಾನ ಪೂಜೆ ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post