ಕಲ್ಪ ಮೀಡಿಯಾ ಹೌಸ್ | ತಿರುವನಂತಪುರಂ |
ವ್ಯಕ್ತಿಯೊಬ್ಬ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಹತ್ಯೆ #Murder ಮಾಡಿ, ತಾನೂ ಸಹ ವಿಷ ಸೇವಿಸಿ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿರುವ ಘಟನೆ ಕೇರಳದ ತಿರುವನಂತಪುರಂನ ವೆಂಜರಮೂಡದಲ್ಲಿ ನಡೆದಿದೆ.
ಹತ್ಯೆ ಆರೋಪಿಯನ್ನು ಅಫಾನ್ (23) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಗೆಳತಿ, ಸಹೋದರ, ಅಜ್ಜಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಚಾಕು ಮತ್ತು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇದಾದ ಬಳಿಕ ಆರೋಪಿ ತಾಯಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಬಳಿಕ ತಾನೂ ವಿಷ ಸೇವಿಸಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ಎದುರು ಹತ್ಯೆಗೈದಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
Also read: ಮಾಜಿ ಸಿಎಂ ಬಿಎಸ್‌ವೈ ಹುಟ್ಟುಹಬ್ಬದ ಹಿನ್ನೆಲೆ: ಫೆ.27ರಂದು ರಕ್ತದಾನ ಶಿಬಿರ
ಇದಾದ ಬಳಿಕ ಆರೋಪಿ ತಾಯಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಬಳಿಕ ತಾನೂ ವಿಷ ಸೇವಿಸಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ಎದುರು ಶರಣಾಗಿದ್ದಾನೆ.
ಅಫಾನ್ ಹೇಳಿಕೆಯಿಂದ ಬೆಚ್ಚಿಬಿದ್ದ ಪೊಲೀಸರು ವಿಷ ಸೇವಿಸಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿಯ ಸಹೋದರ ಅಹ್ಸಾನ್, ಅಜ್ಜಿ ಸಲ್ಮಾ ಬೀವಿ, ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿದಾ ಮತ್ತು ಆತನ ಗೆಳತಿ ಫರ್ಶಾನಾ ಸೇರಿದಂತೆ 5 ಜನರ ಸಾವನ್ನು ಪೊಲೀಸರು ಖಚಿತಪಡಿಸಿರುವುದಾಗಿ ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post