ಪ್ರಭು ಶ್ರೀಕೃಷ್ಣ ಯಾರ ಪರವಾಗಿಯೂ ಅಲ್ಲದೆ ಕೇವಲ ಲೋಕದ ಹಿತ ದೃಷ್ಟಿಯಿಂದ, ಮುಂದೆ ನಡೆಯುವ ಸಂಗ್ರಾಮವನ್ನು ತಡೆಯುವ ಸಲುವಾಗಿ ಶಾಂತಿ ದೂತನಾಗಿ ಹಸ್ತಿನಾಪುರದ ಅರಮನೆಗೆ ಬರುತ್ತಾನೆ. ಮಹಾ ಮುತ್ಸದಿಗಳಾದ ಆಚಾರ್ಯ ಭೀಷ್ಮರು, ದ್ರೋಣಾಚಾರ್ಯರು, ಕೃಪಾಚಾರ್ಯರು, ಮಹಾ ಭಕ್ತ ವಿದುರ ಮುಂತಾದವರು ರಾಜ ಮರ್ಯಾದೆಯಿಂದ ಕೃಷ್ಣನನ್ನು ಸ್ವಾಗತಿಸಿ ಅರಮನೆಗೆ ಕರೆದುಕೊಂಡು ಬರುತ್ತಾರೆ.
ಆ ವೇಳೆ ರಾಜೋಚಿತ ಸನ್ಮಾನಗಳೂ ಚ್ಯುತಿ ಬಾರದಂತೆ ನಡೆಯುತ್ತದೆ. ಆದರೆ ಭೋಜನಕ್ಕೆ ಧೃತರಾಷ್ಟ್ರನ ಆದೇಶದಂತೆ, ತಮ್ಮ ಸ್ವಾರ್ಥವನ್ನೂ ಬಯಸಿ ದುರ್ಯೋಧನನು ತಮ್ಮಲ್ಲಿಗೆ ಕರೆದಾಗ, ಕೃಷ್ಣನು ಭಕ್ತ ವಿದುರನ ಮನೆಗೆ ಆತಿಥ್ಯ ಪಡೆಯಲು ಹೊರಟುಬಿಟ್ಟ. ಇದು ದುರ್ಯೋಧನನಿಗೆ ತೀವ್ರ ಅವಮಾನವಾಯ್ತು, ನಿಂದಿಸಿದ ಮತ್ತು ತನ್ನ ತಕರಾರನ್ನು ಹೇಳಿಬಿಟ್ಟ. ’ಇದು ಹಸ್ತಿನಾಪುರದ ಅರಸರಿಗೆ ಮಾಡುವ ಅವಮಾನ’ ಎಂದೂ ಜರೆದ.
ಆಗ ಕೃಷ್ಣನು ಶಾಂತ ಚಿತ್ತದಿಂದ, ‘ದುರ್ಯೋಧನಾ, ನೀನು ಕೋಪಿಸಿಕೊಳ್ಳುವುದಕ್ಕೆ ಅರ್ಥವಿಲ್ಲ. ನಾನು ಪಾಂಡವರ ಪ್ರತಿನಿಧಿಯಾಗಿ ಬಂದಿದ್ದಿದ್ದರೆ ನಿನ್ನ ಮಾತು ಸತ್ಯ. ಆದರೆ ನಾನು ಸಾಮಾನ್ಯ ಪ್ರಾಮಾಣಿಕವಾದ ಪ್ರಜ್ಞೆಯ ಪ್ರಜೆಯಾಗಿ, ಸಮರವನ್ನು ತಡೆಯುವ ಸಲುವಾಗಿ ಬಂದವನು. ನಿಮ್ಮ ಆಹ್ವಾನವೂ ಇಲ್ಲ, ಪಾಂಡವರ ಸಂದೇಶವೂ ಇಲ್ಲಿಲ್ಲ. ಹಾಗಿದ್ದಾಗ ನಾನು ನನಗಿಷ್ಟವಾದವರಲ್ಲಿ ಆತಿಥ್ಯ ಸ್ವೀಕರಿಸಿದರೆ ಮಾಡಿದರೆ ತಪ್ಪೇನಿದೆ?’ ಎಂದು ವಿದುರನಲ್ಲಿಗೆ ನಡೆದ.
ಮರುದಿನ ರಾಜ ಸಭೆಯಲ್ಲಿ ಸಂಗ್ರಾಮ ತಪ್ಪಿಸುವ ಸಲುವಾಗಿ ಚರ್ಚೆ ನಡೆಯಿತ್ತದೆ. ದುರ್ಯೋಧನನಿಗೆ ಕೃಷ್ಣನ ಯಾವ ಸಲಹೆಗಳು ಹಿಡಿಸಲಿಲ್ಲ ಮತ್ತು ಇನ್ನಷ್ಟು ಕ್ರೋಧಿಯಾದ. ಉದ್ವೇಗದ ಕೈಯಲ್ಲಿ ಬುದ್ಧಿ ಕೊಟ್ಟ. ತನ್ನ ಕೋಪವನ್ನು ಪ್ರಕಟಿಸುವ ಭರದಲ್ಲಿ ಶರೀರದ ಪ್ರಜ್ಞೆಯನ್ನೇ ಮರೆತು ಕೃಷ್ಣನಿದಿರಲ್ಲೇ ಎಡವಿ ಬಿದ್ದ. ಕೃಷ್ಣ ಅವನನ್ನು ಎಬ್ಬಿಸಲು ಹೋದಾಗ ಇನ್ನಷ್ಟು ಕ್ರುದ್ರನಾದ ದುರ್ಯೋಧನ.
ನಿನ್ನೆಯ ಸಂಸತ್ ಕಲಾಪದಲ್ಲಿ ತನ್ನ ಪ್ರಜ್ಞೆಯನ್ನೇ ಕಳೆದುಕೊಂಡ ರಾಹುಲ್ ಗಾಂಧಿ ಮೋದಿಯವರನ್ನು ವಿಪರೀತ ತರಾಟೆಗೆ ತೆಗೆದುಕೊಂಡು ಜರೆದ. ಈ existing nature ಕೊನೆಗೆ ಮೋದಿಯವರನ್ನು ಅಪ್ಪಿಕೊಳ್ಳುವಂತೆಯೂ ಮಾಡಿತು. ಇದು ಕೂಡಾ ಉದ್ವೇಗದ ಕೈಯಲ್ಲಿ ಬುದ್ಧಿಕೊಟ್ಟಂತಾಯಿತು.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post