2019ರ ಲೋಕಸಭೆಯ ಸ್ಥಾನ ಗಳಿಕೆಯ ನಿರ್ಣಯ ಇವತ್ತಿನಿಂದಲೇ ಶುರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಆದರೂ ಒಂದು ಪ್ರಯತ್ನ ಮಾಡೇ ಮಾಡ್ತೀವಿ ಅನ್ನೋ ಛಲ. ಮುಂದಿನ ಸಲದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸುತ್ತದೆ ಎಂಬುದಕ್ಕಿಂತ ವಿರೋಧ ಪಕ್ಷದಲ್ಲಿ ಎಷ್ಟು ಸಂಸದರು ಪವಡಿಸುತ್ತಾರೆ ಎಂಬುದೇ ಇಂದಿನ ಅವಿಶ್ವಾಸ ಗೊತ್ತುವಳಿಯ ಉದ್ದೇಶ.
ಇಂದು ಎಂತಹ ಘನ ಕಾರ್ಯವೂ ನಿಷ್ಪ್ರಯೋಜಕ
ಇವತ್ತು ಶುಕ್ರವಾರ, ಅಷ್ಟಮೀ ತಿಥಿ. ಇದು ದಗ್ಧಯೋಗದ ದಿನ. ಇವತ್ತು ಯಾವ ಘನ ಕಾರ್ಯಮಾಡಿದರೂ ಅದು ನಿಷ್ಪ್ರಯೋಜಕವೇ. ಇಷ್ಟು ದಿನಗಳಿರುವಾಗ ಇವತ್ತಿನ ದಿನವನ್ನೇ ಆಯ್ಕೆ ಮಾಡಿಕೊಂಡರು ಎಂದರೆ ಇದು ತಮ್ಮ ದುರ್ಬಲತೆಯನ್ನು ಇಡೀ ದೇಶಕ್ಕೇ ಎತ್ತಿಹಿಡಿದಂತಾಗುತ್ತದೆ ಅಲ್ಲದೆ ಬೇರೇನೂ ಪ್ರಯೋಜನವಾಗದು. ಆನೆಯನ್ನು ಇದಿರಿನಿಂದ ಹೊಡೆದುರುಳಿಸಲಾಗದ್ದಕ್ಕೆ, ಅದರೆ ಕುಂಡೆಗೆ ಸಣ್ಣ ಕಡ್ಡಿಯನ್ನು ಚುಚ್ಚಿದಂತಾದೀತಷ್ಟೆ. ಇರಲಿ ಅದು ಅವರ ದೌರ್ಭಾಗ್ಯದ ಪರಮಾವಧಿ.
ವಿಫಲ ಯತ್ನವಷ್ಟೇ
ಚುನಾವಣೆ ಹತ್ತಿರ ಬಂದಾಗ ಹತಾಶರಾಗಿ ಇದೊಂದು ಕೊನೆಯ ಪ್ರಯೋಗ ಎಂದು ಹೊರಟ ಹಾಗಿದೆ. ಇಷ್ಟು ಹೊಸ ಹೊಸ ವಿಚಾರಗಳ ಮಂಡನೆಗಳಾದುವು. ಆಗ ಇವರು ಅವಿಶ್ವಾಸ ನಿರ್ಣಯಕ್ಕೆ ಹೊರಟಿದ್ದರೆ ಇದನ್ನು ದೇಶದ ಬಗೆಗಿರುವ ಉತ್ತಮ ಪ್ರಜ್ಞೆ ಎನ್ನಬಹುದಿತ್ತು. ನಮಗೆ ಮೋದಿಯವರನ್ನು ಕಂಡರೆ ಆಗುವುದಿಲ್ಲ ಎಂದು ಮೋದಿಯವರನ್ನು ಹೊಡೆದುರುಳಿಸಲು ಮಾಡಿದ ಒಂದು ದುರುದ್ದೇಶದ ಪ್ರಯತ್ನವಷ್ಟೇ.
ಇವತ್ತಿನ ದಿನದ ನಿರ್ಣಯವು ಮುಂದಿನ ಲೋಕಸಭಾ ಚುನಾವಣೆಯ ನಿರ್ಣಯವಾಗುತ್ತದೆ. ಯಾಕೆಂದರೆ ಮೋದಿಯವರ ಆಳ್ವಿಕೆಯ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಅವಿಶ್ವಾಸ ಗೊತ್ತುವಳಿಗೆ ವಿರೋಧ ಪಕ್ಷಗಳು ಮುಂದಾಗದೆ ಇವತ್ತಿನ ದಗ್ಧ ಯೋಗ ದಿನದಲ್ಲೇ ಮುಂದಾಗಿದೆ ಎಂದರೆ ಇದು ಅವರ ಮುಂದಿನ ಪಥನದ ಸಂಖ್ಯಾ ನಿರ್ಣಯ ಎನ್ನಬಹುದು.
ಅಂತೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸಲಿದೆ ಎಂದು ತಲೆ ಕೆರೆದುಕೊಳ್ಳುವ ಬದಲು, ವಿರೋಧ ಪಕ್ಷದೊಳಗೆ ಎಷ್ಟು ಸ್ಥಾನ ಗಣನೀಯವಾಗಿ ಇಳಿಯಲಿದೆ ಎಂಬ ಸೂಚನೆಯಾಗಿದೆ.
ಗೊತ್ತುವಳಿ ಮಂಡನೆ ಪ್ರಜಾಪ್ರಭುತ್ವದ ಹಕ್ಕು. ಆದರೆ ಯಾವಾಗ ಏನು ಎತ್ತ ಎಂಬ ಪ್ರಜ್ಞೆ ಇಲ್ಲದವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯಾವೃದ್ಧಿಗೆ ಸಹಾಯ ಮಾಡಿದಂತಾಗುತ್ತದೆ. ಇದಕ್ಕೆ ಯಾವ ಜ್ಯೋತಿಷ್ಯಾಧಾರವನ್ನೂ ಕೊಡಬೇಕಾಗಿಲ್ಲ. ಅಂಗೈ ಹುಣ್ಣನ್ನು ಕನ್ನಡಿಯಲ್ಲಿ ನೋಡಿದಂತಾಗಿದೆ.
Discussion about this post