ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತುಮಕೂರು: ಜಲ ಸಂಪನ್ಮೂಲ ಇಲಾಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಇಲಾಖೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯಲ್ಲಿ ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಕಲೇಶಪುರ ಬಳಿ ಯೋಜನೆಯಲ್ಲಿದ್ದ ಲೋಪ ದೋಷಗಳನ್ನು ಸರಿಪಡಿಸಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಎತ್ತಿನ ಹೊಳೆ ಕಾಮಗಾರಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಭೂಸ್ವಾಧೀನಾಕ್ಕಾಗಿ 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಭೂಸ್ವಾಧೀನಾ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ಕಂದಾಯ ಮತ್ತು ಜಲಸಂಪನ್ಮೂಲ ಇಲಾಖೆಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಗುತ್ತಿಗೆದಾರರಿಗೆ ಎಚ್ಚರಿಕೆ
ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಇಲಾಖೆ ಕಾಮಗಾರಿಯನ್ನು ವಿಳಂಬಗೊಳಿಸುವಂತಿಲ್ಲ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಜಲಸಂಪನ್ಮೂಲ ಇಲಾಖೆ ಅನುದಾನಕ್ಕೆ ಕೊರತೆ ಇಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜಲಸಂಪನ್ಮೂಲ ಇಲಾಖೆಯ ಬಗ್ಗೆ ವಿಶೇಷ ಪ್ರೀತಿ ಇದ್ದು, ಕೊರೋನಾ ಸಂಕಷ್ಟದಲ್ಲಿಯೂ ಇಲಾಖೆಯ ಅನುದಾನವನ್ನು ಕಡಿತಗೊಳಿಸಿಲ್ಲ ಹಾಗಾಗಿ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಕೆ.ಎನ್. ರಾಜಣ್ಣಗೆ ಆಹ್ವಾನ
ರಾಜ್ಯದಲ್ಲಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಕಾಂಗ್ರೆಸ್ ಇಲ್ಲ, ಪಕ್ಷದಲ್ಲಿ ಮುಖಂಡರಿಗೆ ಬೆಲೆ ಇಲ್ಲ, ಕಾಂಗ್ರೆಸ್ ಪಕ್ಷ ಬಿಟ್ಟು ಬನ್ನಿ ಎಂದರು ಕೆ.ಎನ್. ರಾಜಣ್ಣ ಬರುತ್ತಿಲ್ಲ, ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಮಾಜಿ ಶಾಸಕ ರಾಜಣ್ಣ ಅವರು ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಕೆ.ಎನ್. ರಾಜಣ್ಣಗೆ ಆಹ್ವಾನ ಮಾಡಿದರು.
ಹುಟ್ಟಿನಿಂದಲೂ ನಾನು ಕಾಂಗ್ರೆಸ್ಸಿಗ ಪಕ್ಷ ಕಡೆಗಣಿಸಿದಾಗಲೇ ನಮ್ಮ ಶಕ್ತಿ ತೋರಿಸಿದ್ದೇನೆ, ನಾನು ರಾಜಣ್ಣ ಅವರೆಲ್ಲ ಸೇರಿ ಸರ್ಕಾರ ಕೆಡವಿದ್ದೇವೆ ಆದರೆ ರಾಜಣ್ಣ ಅವರು ಬಿಜೆಪಿಗೆ ಬರುತ್ತಿಲ್ಲ, ಆಗಲೂ ಜೊತೆಗಿದ್ದೇವೆ, ಈಗಲೂ ಜೊತೆಗಿದ್ದೇವೆ ಬಿಜೆಪಿಗೆ ಬನ್ನಿ ಎಂದರು.
ಈ ಬಗ್ಗೆ ಕೆ.ಎನ್. ರಾಜಣ್ಣ ಮಾತನಾಡಿ, ನನ್ನ ಬಗ್ಗೆ ನಿಮಗೆನೂ ಗೊತ್ತಿದೆ ಯಾವುದರಲ್ಲಿ ಕೈವಾಡ ಇದೆ ಯಾವುದರಲ್ಲಿ ಇಲ್ಲಾ ಅಂತಾ ನಾನು ಯಾವುದರಲ್ಲೂ ಮುಚ್ಚು ಮರೆ ಮಾಡೊದಿಲ್ಲಎಂದು ಬಿಜೆಪಿಗೆ ಆಹ್ವಾನ ನೀಡಿದ ವಿಚಾರದ ಮಾತು ಬದಲಿಸಿ ಎತ್ತಿನ ಹೊಳೆ ವಿಚಾರದ ಎತ್ತಿಕೊಂಡರು.
ಈ ವೇಳೆ ಸಂಸದ ಜಿ.ಎಸ್. ಬಸವರಾಜು, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ, ಎತ್ತಿನಹೊಳೆ ಮುಖ್ಯ ಎಂಜನಿಯರ್ ಮಾಧವ್, ಸೂಪರಿಡೆಂಟ್ ಎಂಜನಿಯರ್ ಶಿವಕುಮಾರ್, ವಿಷೇಶಾಧಿಕಾರಿ ರುದ್ರಯ್ಯ, ಇಇ ರಘುನಂದನ್, ಎಇ ಸುರೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
















