ತುಮಕೂರು: ಇಲ್ಲಿನ ದೇವಾಲಯವೊಂದರಲ್ಲಿ ಪ್ರಸಾದ ಸೇವಿಸಿದವರಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು, ಸುಮಾರು 20ಕ್ಕೂ ಅಧಿಕ ಭಕ್ತರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ನಿಡಗಲ್ಲು ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಶಿರಾದಿಂದ ತೆರಳಿದ್ದ ಭಕ್ತರು ಅಲ್ಲಿಯೇ ಪ್ರಸಾದ ರೂಪದಲ್ಲಿ ಅಡುಗೆ ಮಾಡಿ ಸೇವಿಸಿದ್ದರು. ನೀರಿಲ್ಲದ ಕಾರಣ ತೊಟ್ಟಿ ನೀರನ್ನು ಬಳಸಿ ಊಟ ಮಾಡಿದ್ದ ಹಿನ್ನೆಲೆಯಲ್ಲಿ ವಾಂತಿ, ಬೇಧಿ ಆರಂಭವಾಗಿತ್ತು ಎನ್ನಲಾಗಿದೆ.
ಅಸ್ವಸ್ಥಗೊಂಡ ಹಲವರನ್ನು ತತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 12 ವರ್ಷದ ಬಾಲಕ ಇಹಲೋಕ ತ್ಯಜಿಸಿದ್ದಾನೆ.
Discussion about this post