ಶಿವಮೊಗ್ಗ: ಜಿಲ್ಲೆ ಕಳೆದ 30 ವರ್ಷಗಳಿಂದ ಕಂಡು ಕೇಳರಿಯದ ರೀತಿಯಲ್ಲಿ ಈ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ನಿರಾಶ್ರಿತರ ಗಂಜಿ ಕೇಂದ್ರ ತೆರೆದಿದ್ದು, ಇಲ್ಲಿನ ವ್ಯವಸ್ಥೆ ಕುರಿತಾಗಿ ಕಲ್ಪ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.
ಕಲ್ಪ ನ್ಯೂಸ್’ನ ಹಿರಿಯ ಸಲಹಾ ಸಂಪಾದಕರಾದ ಶ್ರೀ ಡಾ.ಸುಧೀಂದ್ರ ಹಾಗೂ ತಂಡ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತರು ಹಾಗೂ ಅಧಿಕಾರಿಗಳನ್ನು ಮಾತನಾಡಿಸಿತು.
ರಾಮಣ್ಣಶ್ರೇಷ್ಠಿ ಪಾರ್ಕ್ ನಲ್ಲಿನ ಗಂಜಿಕೇಂದ್ರದ ವ್ಯವಸ್ಥೆ ನಿರ್ವಹಣೆ ಬಗ್ಗೆ ಪಾಲಿಕೆ ಅಧಿಕಾರಿ ಶ್ರೀಮತಿ ಅನುಪಮ ಅವರು ಮಾತನಾಡಿ ಹೇಳಿದ್ದಿಷ್ಟು:
ಇನ್ನು, ನಿರಾಶ್ರಿತರಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯು ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ತೆರೆದ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ವಸತಿ ಮತ್ತು ಊಟ ವ್ಯವಸ್ಥೆ ಮಾಡಿದ್ದು, ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಹ ಜಿಲ್ಲಾಡಳಿತ ಹಾಗೂ ಪಾಲಿಕೆ ಬಹುತೇಕ ವ್ಯವಸ್ಥಿತವಾಗಿ ಎಲ್ಲವನ್ನೂ ನಿರ್ವಹಣೆ ಮಾಡುತ್ತಿರುವುದು ಪ್ರಶಂಸನೀಯ.
ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಹಲವು ನಿರಾಶ್ರಿತರು, ಪಾಲಿಕೆಯ ಅದರಲ್ಲೂ ಪ್ರಮುಖವಾಗಿ ಆಯುಕ್ತೆ ಚಾರುಲತಾ ಸೋಮಲ್ ಹಾಗೂ ತಂಡದ ಸ್ತುತ್ಯರ್ಹ ಪ್ರಯತ್ನಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು, ನಿರಾಶ್ರಿತರಿಗೆ ಸಹಾಯಹಸ್ತ ಚಾಚಿರುವ ಜನಸಾಮಾನ್ಯರು, ವ್ಯಾಪಾರಸ್ಥರು, ಸಮಾಜದ ವಿವಿಧ ಕ್ಷೇತ್ರ- ವೃತ್ತಿನಿರತರು ತಮ್ಮ ಕೈಲಾದ ಕೊಡುಗೆಗಳನ್ನು ವಾಹನದಲ್ಲಿ ಮತ್ತು ಪುಟ್ಟ ಗಂಟುಗಳಲ್ಲಿ ಆಹಾರಧಾನ್ಯ ಹೊತ್ತುತರುವ ದೃಶ್ಯವೂ ಕಾಣ ಸಿಗುತ್ತಿತ್ತು.
ಒಟ್ಟಾರೆಯಾಗಿ ನಿರಾಶ್ರಿತರ ತಾತ್ಕಾಲಿಕ ಗಂಜಿ ಕೇಂದ್ರದ ವ್ಯವಸ್ಥೆ, ಪರಿಸ್ಥಿತಿಯ ನಿರ್ವಹಣೆ ಕುರಿತಾಗಿ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಇವರ ಈ ಶ್ರಮಕ್ಕೆ ಫುಲ್ ಮಾರ್ಕ್ಸ್ ಕೊಡಬಹುದಾಗಿದೆ.
Discussion about this post