ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿಂದು ಇಬ್ಬರಲ್ಲಿ ಕೊರೋನಾ ಪಾಸಿಟಿವ್ #CoronaPositive ಕೇಸ್ ದಾಖಲಾಗಿದ್ದು, ಶಿವಮೊಗ್ಗ #Shivamogga ಹಾಗೂ ಸೊರಬ ತಾಲೂಕು ಇದರಲ್ಲಿ ಸೇರಿದೆ.
ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಶಿವಮೊಗ್ಗ ಹಾಗೂ ಸೊರಬ #Soraba ತಾಲೂಕಿನಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಂದು ಒಟ್ಟು 236 ಮಂದಿಯ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಒಟ್ಟು 10 ಸಕ್ರಿಯ ಪ್ರಕರಣಗಳಿವೆ.
ಪಾಸಿಟಿವ್ ಇರುವ 10ರಲ್ಲಿ 8 ಮಂದಿ ಹೋಂ ಐಸೋಲೇಶನ್ ಹಾಗೂ ಇಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post