ತಿರುವನಂತಪುರಂ: ಶಬರಿಮಲೆ ದೇವಾಲಯವನ್ನು ಮಹಿಳೆಯರು ಪ್ರವೇಶಿಸುವ ವಿಫಲ ಯತ್ನ ಮುಂದುವರೆದಿದ್ದು, ಇಂದೂ ಸಹ ಪ್ರವೇಶಕ್ಕೆ ಯತ್ನಿಸಿದ ಮುಸ್ಲಿಂ ಮಹಿಳೆಯನ್ನು ಭಕ್ತರು ತರಾಟೆಗೆ ತೆಗೆದುಕೊಂಡಿದ್ದು, ಇದಕ್ಕೆ ಹೆದರಿದ ಆಕೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಕಿಸ್ ಆಫ್ ಲವ್ (ಕು)ಖ್ಯಾತಿಯ ಮಹಿಳಾ ಕಾರ್ಯಕರ್ತೆ ಎಂದು ಹೇಳಿಕೊಳ್ಳುವ ರೆಹಾನಾ ಫಾತಿಮಾ ಹಾಗೂ ಆಂಧ್ರಪ್ರದೇಶ ಮೂಲದ ಪತ್ರಕರ್ತೆ ಕವಿತಾ ಜಕ್ಕಲ್ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಯ್ಯಪ್ಪ ಭಕ್ತರು ತೀವ್ರ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಹೆದರಿದ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಮಹಿಳೆಯರು ದೇಗುಲದತ್ತ ಹೆಜ್ಜೆ ಹಾಕಿದ್ದರು. ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಭದ್ರತೆಯ ಮೂಲಕ ದೇವಾಲಯದತ್ತ ತೆರಳಿದ್ದರು. ಮಹಿಳೆಯರು ಪಂಪಾ ದಾಟುತ್ತಿದ್ದಂತೆಯೇ ಪ್ರತಿಭಟನೆ ತೀವ್ರಗೊಂಡಿದ್ದು, ಈ ವೇಳೆ ಸ್ವತಃ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಶಬರಿಲಮಯೆ ಪವಿತ್ರ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿ ಭಕ್ತರು ಕುಳಿತು ನಾವು ಸತ್ತರೂ ಸರಿಯೇ ಮೆಟ್ಟಿಲ ಮೂಲಕ ಮಹಿಳೆಯರು ತೆರಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಎಲ್ಲಕ್ಕೂ ಮಿಗಿಲಾಗಿ, ಇವರು ದೇವಾಲಯ ಪ್ರವೇಶ ಮಾಡಿದ್ದೇ ಆದಲ್ಲಿ, ದೇವಾಲಯದ ಬಾಗಿಲು ಮುಚ್ಚಿ, ಪೂಜೆ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಸಂಧಾನ ನಡೆಸಿದರು. ಪ್ರತಿಭಟನೆ ಹೆದರಿ ಹಾಗೂ ಪೊಲೀಸರು ನೀಡಿದ ಸಲಹೆಯಂತೆ ಇಬ್ಬರೂ ಮಹಿಳೆಯರು ಹಿಂದಕ್ಕೆ ಕಾಲ್ಕಿತ್ತಿದ್ದಾರೆ.
ಇಲ್ಲಿಯವರೆಗೆ 50 ವರ್ಷದ ಒಳಗಿನ ಯಾವುದೇ ಮಹಿಳೆಗೆ ದೇವಾಲಯ ಪ್ರವೇಶಿಸಲು ಸಾಧ್ಯವಾಗಿಲ್ಲ. ಗುರುವಾರ ನ್ಯೂಯಾರ್ಕ್ ಟೈಮ್ಸï ನ ಪತ್ರಕರ್ತೆಗೆ ಭಾರೀ ವಿರೋಧ ತೋರಿ ಹಿಂದಕ್ಕೆ ಕಳುಹಿಸಲಾಗಿತ್ತು.
Discussion about this post