ಕಲ್ಪ ಮೀಡಿಯಾ ಹೌಸ್ | ಉಡುಪಿ/ಭದ್ರಾವತಿ |
ಶತಮಾನೋತ್ಸವ ಸಂಭ್ರಮದಲ್ಲಿರುವ ಭದ್ರಾವತಿ ವಿಐಎಸ್‌ಎಲ್ Bhadravathi VISL ಉಳಿಸಿಕೊಳ್ಳಲು ಬೆಂಬಲ ನೀಡುವಂತೆ ಕಾರ್ಖಾನೆ ಕಾರ್ಮಿಕರ ನಿಯೋಗದ ವತಿಯಿಂದ ಉಡುಪಿ ಪೇಜಾವರ ಶ್ರೀಗಳಿಗೆ Udupi Pejawara Shri ಮನವಿ ಮಾಡಲಾಯಿತು.
ಪೇಜಾವರ ಶ್ರೀ ಗಳನ್ನು ಉಡುಪಿ ಯಲ್ಲಿ ಭೇಟಿ ಮಾಡಿ ಸತ್ಕರಿಸಿ, ದೊಡ್ಡಣ್ಣನವರ ನೇತೃತ್ವದಲ್ಲಿ ನಡೆದ VISL ಕಾರ್ಖಾನೆ ಶತಮಾನೋತ್ಸವ ಸಮಾರಂಭ ಹಾಗೂ ಕಾರ್ಖಾನೆ ಯ ಇತ್ತೀಚಿನ ಬೆಳವಣಿಗೆ ಗಳನ್ನು ಶ್ರೀಗಳ ಗಮನಕ್ಕೆ ತರಲಾಯಿತು. VISL ಕಾರ್ಖಾನೆ ಉಳಿಸಿಕೊಳ್ಳಲು ಮೈಸೂರು ಮಹಾರಾಜರು, ಜಿಲ್ಲೆಯ ಸಂಸದರು, ಭದ್ರಾವತಿ ಶಾಸಕರು, ಜಿಲ್ಲಾ ಸಚಿವರು ರಾಜ್ಯದ ಪ್ರಮುಖ ಮಠಗಳ ಮಠದೀಶರುಗಳು ಹಾಗೂ ನಾಡಿನ ಪ್ರಮುಖರುಗಳನ್ನು ಒಳಗೊಂಡ ನೀಯೋಗವು ಪ್ರಧಾನ ಮಂತ್ರಿಗಳನ್ನು Prime Minister ಭೇಟಿಯಾಗುತ್ತಿದ್ದು. ತಾವುಗಳು ಆ ನೀಯೋಗದಲ್ಲಿ ಭಾಗಿಯಾಗಿ, ಪ್ರಧಾನ ಮಂತ್ರಿಗಳ ಮನವೊಲಿಸಿ ಕಾರ್ಖಾನೆಯನ್ನು ಉಳಿಸಿ ಕೊಡಬೇಕಾಗಿ ಮನವಿ ಮಾಡಿಕೊಳ್ಳಲಾಯಿತು.

Also read: ಕಾಮಧೇನು ಸಿಕ್ಕಾಗ ಸೆಗಣಿ ಬೇಡಬಾರದು, ಅಮೂಲ್ಯವಾದದ್ದನ್ನು ಬೇಡಬೇಕು
ಕಾರ್ಖಾನೆ ವಿಚಾರದಲ್ಲಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುವ ನೀಯೋಗದಲ್ಲಿ ಖಂಡಿತವಾಗಿ ಜೊತೆಯಾಗಲಿದ್ದು, ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅಭಯ ನೀಡಿದರು.











Discussion about this post