ಕಲ್ಪ ಮೀಡಿಯಾ ಹೌಸ್ | ಉಡುಪಿ |
ಕರುನಾಡಿನಲ್ಲಿ ಎರಡು ಧರ್ಮಗಳ ನಡುವೆ ಬಿರುಕಿಗೆ ಕಾರಣವಾಗಿದ್ದ ಹಿಜಾಬ್ ವಿವಾದದ HIjab Row ಮೂಲ ಕೇಂದ್ರ ಸ್ಥಾನ ಉಡುಪಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿಗೆ ಅದೇ ಧರ್ಮದ 40ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ದಾಖಲಾತಿ ಪಡೆಯುವುದರೊಂದಿಗೆ ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂದು ಸಾರಿದ್ದಾರೆ.
ಹೌದು… ಪ್ರತಮ ಪಿಯುಸಿಗೆ ಪ್ರಸ್ತುತ ವರ್ಷದ ದಾಖಲಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 250 ವಿದ್ಯಾರ್ಥಿನಿಯರಿಗೆ ಅವಕಾಶವಿರುವ ಈ ಕಾಲೇಜಿನಲ್ಲಿ ಈಗ 335 ಮಕ್ಕಳ ಪ್ರವೇಶಕ್ಕೆ ಅನುವತಿ ನೀಡಲಾಗಿದೆ. ಹಾಗೂ ಹೆಚ್ಚುವರಿಯಾಗಿ ಎರಡು ತರಗತಿಯನ್ನು ಪ್ರಾರಂಭಿಸಲಾಗಿದೆ.
Also read:
ಹಿಜಾಬ್ ವಿವಾದದಿಂದಾಗಿ ಸರ್ಕಾರಿ ಮಹಿಳಾ ಕಾಲೇಜಿಗೆ ದಾಖಲಾತಿ ಪ್ರಮಾಣ ಕುಸಿತ ಕಾಣುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಪ್ರಸ್ತುತ ವರ್ಷ 40 ಮುಸ್ಲಿಂ ವಿದ್ಯಾರ್ಥಿನಿಯರು ಸೇರ್ಪಡೆಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post