ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಗೋಹತ್ಯಾ ನಿಷೇಧ ಕಾನೂನನ್ನು ವಿಶೇಷ ಮುತುವರ್ಜಿ ವಹಿಸಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಗೋಹತ್ಯಾ ನಿಷೇಧ ಕಾನೂನು ಪರಿಣಾಮಕಾರಿ ಅಧ್ಯಾದೇಶ ಜಾರಿ ಮತ್ತು ಗೋರಕ್ಷಣೆಯ ಉಪಕ್ರಮಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.
ಮಾತುಕತೆಯ ವೇಳೆ ಗೋಮಾಳ ಭೂಮಿಗಳನ್ನು ಗೋಶಾಲೆಗೆ ಗುತ್ತಿಗೆ ನೀಡುವ, ದೇವಳಗಳ ಮತ್ತು ಸಹಕಾರ ಸಂಘ ಬ್ಯಾಂಕ್’ಗಳ ಆದಾಯದ ಒಂದು ಭಾಗ ಗೋಶಾಲೆಗಳಿಗೆ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಬಗ್ಗೆ ಶ್ರೀಗಳು ತಿಳಿಸಿ, ಇವುಗಳನ್ನು ಕೂಡಲೇ ಅನುಷ್ಠಾಸುತ್ತೇವೆ ಎಂದರು.
ಶಾಸನ ಜಾರಿಗೆ ತಂದ ಬಗ್ಗೆ ಶ್ಲಾಘಿಸಿದ ಶ್ರೀಗಳು ಸಚಿವರನ್ನು ಸನ್ಮಾನಿಸಿದರು. ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ. ಸುರೇಶ್ ಗೌಡ, ಮಠದ ಪರವಾಗಿ ಕೃಷ್ಣ ಭಟ್ ವಾಸುದೇವ ಭಟ್ ವಿಷ್ಣುಮೂರ್ತಿ ಆಚಾರ್ಯ ಮಹೇಶ ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಸಚಿವರನ್ನು ಬರಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post