ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಜಿಲ್ಲೆಯ ಬ್ರಹ್ಮಾವರದ ಪ್ರತಿಷ್ಠಿತ ರುಚಿ ಬೇಕರಿಯಲ್ಲಿ ಬೃಹತ್ ಗಾತ್ರ ಓವನ್ ಸ್ಪೋಟಗೊಂಡ ಪರಿಣಾಮ ಮಾಲೀಕ ರಾಬರ್ಟ್ ಪುಟಾರ್ಡೋ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಮುಂಜಾನೆ ತಯಾರಿಕಾ ಘಟಕದಲ್ಲಿ ಎಂದಿನಂತೆ ಓವನ್ ಆನ್ ಮಾಡಿದ ತಕ್ಷಣವೇ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆ ರಾಬರ್ಟ್ ಅವರ ದೇಹ ಛಿತ್ರವಾಗಿ ದೂರಕ್ಕೆ ಹಾರಿ ಬಿದ್ದಿದೆ ಎಂದು ವರದಿಯಾಗಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post