ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶೀರೂರು ಮಠದ #Shirur Mutt ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಉಡುಪಿ ಶ್ರೀ ಕೃಷ್ಣ ಮಠದ #Udupi Shri Krishna Mutt ರಥಬೀದಿಯ ಕನಕನ ಕಿಂಡಿ ಮುಂಭಾಗದಲ್ಲಿ ನಡೆಯಿತು.
ಖ್ಯಾತ ಸಾಹಿತಿ ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮನೆ ಮನೆಗೆ ಆಹ್ವಾನ ಪತ್ರಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಶ್ರೀ ಮಠದ ದಿವಾನರಾದ ಉದಯಕುರ್ಮಾ ಸರಳತ್ತಾಯರವರು ಕೃಷ್ಣನ ಸನ್ನಿಧಾನದಲ್ಲಿ ಆಹ್ವಾನಪತ್ರಿಕೆ ಇಟ್ಟು ಪ್ರಾರ್ಥನೆ ಸಲ್ಲಿಸಿದರು. ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮರ್ಟ್ಟಾ ರತ್ನಾಕರ ಹೆಗ್ಡೆ, ಕೋಶಾಧಿಕಾರಿಗಳಾದ ಜಯಪ್ರಕಾಶ್ ಕೆದ್ಲಾಯ, ಸಂಚಾಲಕರಾದ ಸುಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಸಂದೀಪ್ ಮಂಜ, ಶ್ರೀಕಾಂತ ನಾಯಕ್, ಮಹಿಳಾ ಸಮಿತಿಯ ಸಂಚಾಲಕರುಗಳಾದ ಪದ್ಮಾ ರತ್ನಾಕರ,ನಯನ ಗಣೇಶ್, ವೀಣಾ ಶೆಟ್ಟಿ, ತಾರಾ ಆಚಾರ್ಯ, ನೀತಾಪ್ರಭು, ಪ್ರಮುಖರಾದ ಉದಯಕುಮಾರ್ ಶೆಟ್ಟಿ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಶ್ರೀಕಾಂತ್ ಉಪಾಧ್ಯಾಯ, ಹರೀಶ್ ಬೈಲಕೆರೆ ಮತ್ತು ವಿವಿಧೆಡೆಯಿಂದ ಆಗಮಿಸಿದ ಕೃಷ್ಣ ಭಕ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















