ಕಲ್ಪ ಮೀಡಿಯಾ ಹೌಸ್ | ಉಡುಪಿ/ಶಿವಮೊಗ್ಗ |
ಹವ್ಯಾಸ ಛಾಯಾಗ್ರಾಹಕ, ಬರಹಗಾರ, ಪತ್ರಕರ್ತ ಆದಿತ್ಯಪ್ರಸಾದ್ ಅವರು ಬರೆದಿರುವ `ಗೋಪಾಳದಿಂದ ನೇಪಾಳದೆಡೆಗೆ’ ಕೃತಿ ಲೋಕಾರ್ಪಣೆಗೊಂಡಿದೆ.
ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸುಗುಣಮಾಲಾ’ ಮಾಸಪತ್ರಿಕೆ ಹಾಗೂ ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ವಿಕಾಸಭಿ ನೇತೃತ್ವದಲ್ಲಿ ಗೀತಾ ಮಂದಿರದ ಪುತ್ತಿಗೆ ಶ್ರೀನರಸಿಂಹ ಸಭಾಭವನದಲ್ಲಿ ನಡೆದ ಕರಾವಳಿ ವಿಕಾಸ ಸಂಭ್ರಮ’ ಕಾರ್ಯಕ್ರಮದಲ್ಲಿ ಶ್ರೀಗಳು ಕೃತಿಯನ್ನು ಬಿಡುಗಡೆ ಮಾಡಿದರು.
ಗೋಪಾಳದಿಂದ ನೇಪಾಳದೆಡೆಗೆ ಕುರಿತಾಗಿ:
ಹವ್ಯಾಸ ಛಾಯಾಗ್ರಾಹಕರಾದ ಆದಿತ್ಯಪ್ರಸಾದ್ ಅವರು ಛಾಯಾಚಿತ್ರ ತಜ್ಞರಷ್ಟರ ಮಟ್ಟಿಗೆ ಪರಿಣಿತಿ ಹೊಂದಿದ್ದಾರೆ. ಇಂತಹ ವ್ಯಕ್ತಿ, ರಚಿಸಿರುವ ಗೋಪಾಳದಿಂದ ನೇಪಾಳದೆಡೆಗೆ ಕೃತಿ ಇವರ ಛಾಯಾಗ್ರಹಣ ತಂತ್ರಜ್ಞತೆಗೆ ಸಾಕ್ಷಿಯಾಗಿದೆ.
ಈ ಕೃತಿಯಲ್ಲಿ ಹಿಮಾಲಯದ ನಿಗೂಢ ಪರ್ವತಗಳು ಹಾಗೂ ವಿಶಾಲವಾದ ಲ್ಯಾಂಡ್ ಸ್ಕೇಪ್’ಗಳ ವಿಷಯದಲ್ಲಿ ಮಾತ್ರವಲ್ಲ, ತಾಜ್ ಮಹಲ್’ನಂತಹ ಲೌಕಿಕ ಕಟ್ಟಡದ ಚಿತ್ರಣವನ್ನು ಕೊಡುವಾಗಲೂ, ಅದರಲ್ಲಿ ಕೂಡ ಒಂದು ಅಂತರ್ಮುಖತೆ ಕಾಣಿಸುವ ಹಾಗೆ ಅವರು ಛಾಯಾಚಿತ್ರಗಳನ್ನು ಬಿಡಿಸಿ ಕೊಟ್ಟಿದ್ದಾರೆ.
ಈ ಕೃತಿಯಲ್ಲಿ ಛಾಯಾಚಿತ್ರಗಳಿಗೆ ಪೂರಕವಾಗಿ ಅಷ್ಟಿಷ್ಟು ವಾಚ್ಯವಾಗುವಂತೆ ಮಾತುಕತೆ, ಘಟನಾವಳಿಗಳನ್ನು ಕೂಡ ಸೇರಿಸಿರುವುದು ಚಿತ್ರಗಳಿಗೆ ಪೂರಕವಾದಂತೆ ಇದೆಯೇ ಹೊರತು ಪ್ರತ್ಯೇಕವಾಗಿ ನಿಲ್ಲುವುದಿಲ್ಲ. ಈ ಮಾತು ಅವರ ಛಾಯಾಗ್ರಹಣದ ಶಕ್ತಿಯನ್ನು ಸಾಕ್ಷೀಕರಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















