ಕಲ್ಪ ಮೀಡಿಯಾ ಹೌಸ್ | ಉಡುಪಿ |
ಇಲ್ಲಿನ ಕರಾವಳಿ ಬೈಪಾಸ್ ಮೇಲ್ಸೇತುವೆ ಮೇಲಿಂದ ಹಾರಿದ ಕಾರೊಂದು ಸೇತುವೆ ಕೆಳಗೆ ತೆರಳುತ್ತಿದ್ದ ಬೈಕ್ ಮೇಲೆ ಬಿದ್ದು ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಬಾಗಲಕೋಟೆ ಮೂಲದ ಸುನೀಲ್ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಉಡುಪಿಯ ಕರಾವಳಿ ಬೈಪಾಸ್’ನಲ್ಲಿ ಕಾರು ಮೇಲ್ಸೇತುವೆಯಲ್ಲಿ ಮಂಗಳೂರಿನತ್ತ ಪ್ರಯಾಣಿಸುತ್ತಿತ್ತು. ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆಳಗೆ ರಸ್ತೆಗೆ ಉರುಳಿ ಬಿದ್ದಿದೆ. ಉರುಳಿ ಬಿದ್ದ ಕಾರು ಕೆಳ ರಸ್ತೆಯಲ್ಲಿ ಬೈಕ್ ಸವಾರನ ಮೈಮೇಲೆ ಬಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್’ನಲ್ಲಿ ಸವಾರನೊಂದಿಗೆ ಆತನ ತಾಯಿಯೂ ಸಹ ಇದ್ದರು ಎಂದು ವರದಿಯಾಗಿದೆ.
Also read: ನ್ಯಾಯಾಂಗ ನಿಂದನೆ: ವಿಜಯ್ ಮಲ್ಯಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ
ಕೆಳಕ್ಕೆ ಬಿದ್ದ ಕಾರಿನಲ್ಲಿದ್ದ ಮಹಿಳೆ ಮತ್ತು ಅವರ ಮಗನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















