ಕಲ್ಪ ಮೀಡಿಯಾ ಹೌಸ್ | ಯುಕೆ |
ಭಾರತ ದೇಶವೇ ಬೆಚ್ಚಿ ಬೀಳುವಂತೆ ಮುಂಬೈನಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ Mumbai attack master mind Hafiz ಪಾಕಿಸ್ಥಾನದ ವಶದಲ್ಲಿದ್ದಾನೆ ಎಂದು ವರದಿಯಾಗಿದೆ.
ಈ ಕುರಿತಂತೆ ಸ್ವತಃ ವಿಶ್ವಸಂಸ್ಥೆಯೇ ಮಾಹಿತಿ ಪ್ರಕಟಿಸಿದ್ದು, 2008 ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿರ್ಬಂಧಕ್ಕೊಳಗಾಗಿರುವ ಜಾಗತಿಕ ಭಯೋತ್ಪಾದಕ ಸಯೀದ್, ಪಾಕಿಸ್ಥಾನ ಸರ್ಕಾರದ ವಶದಲ್ಲಿದಲ್ಲಿದ್ದಾನೆ ಎಂದಿದೆ.

Also read: ಅಲೆಮಾರಿ ಸಮುದಾಯದ ದೇವಾಲಯಕ್ಕೆ ಚಿಂತಾಮಣಿ ಸ್ವಾಮಿಗಳ ಭೇಟಿ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವೆಂಟ್ ಮತ್ತು ಅಲ್-ಖೈದಾ ಮೇಲಿನ ನಿರ್ಬಂಧಗಳಾದ ಸ್ವತ್ತುಗಳು ಜಪ್ತಿ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಟ್ಟಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಯಮಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಅದರಲ್ಲಿ ಹಫೀಜ್ ಪಾಕಿಸ್ಥಾನದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಬಗ್ಗೆ ವಿವರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post