ಉತ್ತರಪ್ರದೇಶ: ಉತ್ತರ ಭಾರತದಲ್ಲಿ ಕುಖ್ಯಾತಿ ಗಳಿಸಿದ್ದ ಮಾಫಿಯಾ ಡಾನ್ ಮುನ್ನಾ ಭಜರಂಗಿಯನ್ನು ಹತ್ಯೆ ಮಾಡಲಾಗಿದ್ದು, ಇದು ಭೂಗತಲೋಕವನ್ನು ತಲ್ಲಣಗೊಳಿಸಿದೆ.
ರಂಗಧಾರಿ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಲು ಮುನ್ನಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಜೈಲಿನಿಂದ ಹೊರಕ್ಕೆ ಕರೆದುಕೊಂಡು ಬರುತ್ತಿರುವ ವೇಳೆ ಹತ್ಯೆ ಮಾಡಲಾಗಿದೆ.
ಶಾಕಿಂಗ್ ವಿಚಾರವೆಂದರೆ, ಮುನ್ನಾನನ್ನು ಶೂಟ್ ಮಾಡಿದ್ದು, ಅದೇ ಜೈಲಿನ ಕಂಬಿಗಳ ಹಿಂದೆ ಇದ್ದ ಮತ್ತೊಬ್ಬ ಖೈದಿ ಎಂದು ವರದಿಯಾಗಿದ್ದು, ಜೈಲಿನಲ್ಲಿ ಶಸ್ತ್ರಾಸ್ತ್ರಗಳು ಸರಾಗವಾಗಿ ಹರಿದಾಡುತ್ತಿವೆ ಎಂಬುದು ತಿಳಿದುಬರುತ್ತಿದೆ.
ಘಟನೆ ನಡೆದ ತತಕ್ಷಣವೇ ಮುನ್ನಾ ಪತ್ನಿ ಪತ್ರಿಕಾಗೋಷ್ಠಿ ನಡೆಸಿದ್ದು, ಪೊಲೀಸರೇ ನಕಲಿ ಎನ್ ಕೌಂಟರ್ ಮಾಡಿ ನನ್ನ ಪತಿಯನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
Discussion about this post