ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಪ್ರಾಪ್ತೆ ಮೇಲೆ ಅತ್ಯಾಚಾರ #Rape ಎಸಗಿದ ಆರೋಪದಲ್ಲಿ ಉತ್ತರ ಪ್ರದೇಶದ #UttarPradesh ಬಿಜೆಪಿ ಶಾಸಕ ರಾಮದುಲರ್ ಗೊಂಡ್’ಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇದರ ಬೆನ್ನಲ್ಲೇ ವಿಧಾನಸಭೆಯ ಸದಸ್ಯತ್ವವೂ ಸಹ ರದ್ದುಗೊಳ್ಳಲಿದೆ ಎಂದು ವರದಿಯಾಗಿದೆ.
ಗೋಂಡ್ ಸೋನ್ಬದ್ರಾ ಜಿಲ್ಲೆಯ ದುದ್ದಿ ಕ್ಷೇತ್ರದ ಶಾಸಕರಾದ ರಾಮದುಲರ್ ಅವರನ್ನು ತಪ್ಪಿತಸ್ಥ ಎಂದು ಎರಡು ದಿನಗಳ ಹಿಂದೆ ಪರಿಗಣಿಸಿ, ಇಂದು ತೀರ್ಪು ನೀಡಲಾಗಿದೆ.
ಇಂದು ಬಿಗಿ ಪೊಲೀಸ್ ಭದ್ರತೆಯ ನಡುವೆ ಶಾಸಕ ರಾಮದುಲರ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಯಿತು.
ನ್ಯಾಯಾಲಯ ಆತನಿಗೆ 25 ವರ್ಷಗಳ ಶಿಕ್ಷೆ ಹಾಗೂ 10.5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಸಂಪೂರ್ಣ ದಂಡದ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ.
2014ರ ನ.4ರ ಸಂಜೆ ಬಾಲಕಿಯು ಮೂತ್ರ ವಿಸರ್ಜನೆಗಾಗಿ ಸಮೀಪದ ಹೊಲಕ್ಕೆ ಹೋಗಿದ್ದಾಗ ಆಕೆಗೆ ರಾಮದುಲರ್ ಗೊಂಡ್ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದ. ಮನೆಗೆ ಹಿಂದಿರುಗಿದ ನಂತರ, ಹುಡುಗಿ ತನ್ನ ಅಣ್ಣನಿಗೆ ಈ ವಿಚಾರವನ್ನು ತಿಳಿಸಿದ್ದಳು ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post