ಕಲ್ಪ ಮೀಡಿಯಾ ಹೌಸ್ | ಗೊಂಡಾ |
ಒಂದೆಡೆ ಉತ್ತರ ಪ್ರದೇಶದ #UttarPradesh ಚುನಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಭಾರಿಸಿರುವ ಯೋಗಿ ಆದಿತ್ಯನಾಥ್ #YogiAdityanath ಮಾರ್ಚ್ 25ರಂದು 2ನೆಯ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಗಿದ್ದರೆ, ಇನ್ನೊಂದೆಡೆ ಆ ರಾಜ್ಯದಲ್ಲಿ ರೌಡಿಗಳು ದುಂಬಾಲು ಬಿದ್ದು, ಪೊಲೀಸರಿಗೆ #Police ಶರಣಾಗುತ್ತಿರುವ ಘಟನೆ ನಡೆದಿದೆ.
Also Read: ಸಹಬಾಳ್ವೆಯ ಪರಿಕಲ್ಪನೆ ಬೆಳೆಸುವಲ್ಲಿ ಎನ್’ಎಸ್’ಎಸ್ ಪಾತ್ರ ಮಹತ್ವದ್ದು: ಪರಿಸರ ನಾಗರಾಜ್
ಹೌದು… ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಮಾಜಘಾತುಕರ ವಿರುದ್ಧ ಸಮರ ಸಾರಿ, ಕಾನೂನು ಸುವ್ಯವಸ್ಥೆಗೆ #LawAndOrder ಸೆಡ್ಡು ಹೊಡೆದು ಮೆರೆಯುತ್ತಿದ್ದ ಘಾತುಕರ ವಿರುದ್ಧ ಎನ್’ಕೌಂಟರ್ #Encounter ಅಸ್ತ್ರ ಪ್ರಯೋಗಿಸಿದ್ದರು. ಈಗ ಇದೇ ಯೋಗಿ ಮತ್ತೊಮ್ಮೆ ಸಿಎಂ ಆಗುತ್ತಿದ್ದು, ಇದು ಅಲ್ಲಿನ ಗೂಂಡಾಗಳು ನಿದ್ದೆಯಲ್ಲೂ ಚೆಡ್ಡಿ ಒದ್ದೆ ಮಾಡಿಕೊಳ್ಳುವಂತೆ ಆಗಿದೆ. ಅಂತಹ ಭಯ ಸೃಷ್ಠಿಸಿದ್ದಾರೆ ಯೋಗಿ ಆದಿತ್ಯನಾಥ್.
ದುಂಬಾಲು ಬಿದ್ದು ಶರಣು!
ಕಿಡ್ನಾಪ್ #Kidnap ಪ್ರಕರಣದಲ್ಲಿ ಪೊಲೀಸರಿಗೆ ಬಹಳ ದಿನಗಳಿಂದ ಬೇಕಾಗಿರುವ ರೌಡಿಯೊಬ್ಬ ನಾನು ಶರಣಾಗುತ್ತಿದ್ದೇನೆ, ದಯಮಾಡಿ ಶೂಟ್ ಮಾಡಬೇಡಿ ಎಂಬ ಪ್ಲಕಾರ್ಡನ್ನು ತನ್ನ ಕುತ್ತಿಗೆಗೆ ನೇತು ಹಾಕಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.
Also Read: ಪಠ್ಯಪುಸ್ತಕದಲ್ಲಿ ಪುನೀತ್ ರಾಜಕುಮಾರ್ ಬದುಕಿನ ಕಥೆ ಅಳವಡಿಕೆ!? ಸರ್ಕಾರ ಗಂಭೀರ ಚಿಂತನೆ

ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳಿಗೆ ಮಾತನಾಡಿರುವ ಅಲ್ಲಿನ ಎಸ್’ಪಿ ಸಂತೋಷ್ ಮಿಶ್ರಾ, ಮಾರ್ಚ್ ೭ರಂದು ಈ ಘಟನೆ ನಡೆದ ನಂತರ ಆರೋಪಿಗಳ ಪತ್ತೆಯಾಗಿ ತಂಡ ರಚಿಸಿ ಇಬ್ಬರನ್ನು ಬಂಧಿಸಲಾಗಿತ್ತು. ಆದರೆ, ಪ್ರಮುಖ ಆರೋಪಿ ಗೌತಮ್ ಸಿಂಗ್ ತಪ್ಪಿಸಿಕೊಂಡಿದ್ದನು. ಆನಂತರ ಈತನ ಸುಳಿವು ನೀಡಿದವರಿಗೆ 25 ಸಾವಿರ ರೂ. ಬಹುಮಾನ ಘೋಷಿಸಿ, ಆತನಿಗಾಗಿ ನಿರಂತರವಾಗಿ ಹುಡುಕಾಟ ನಡೆಸಲಾಗಿತ್ತು ಎಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post