ಕಲ್ಪ ಮೀಡಿಯಾ ಹೌಸ್ | ಉತ್ತರ ಕನ್ನಡ |
ಲೋಕಸಭಾ ಚುನಾವಣೆಯ #Lok Sabha Election ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ #Vishweshwara Hegde Kageri ಜಯಭೇರಿ ಹಾರಿಸಿದ್ದು, ಕರಾವಳಿಯಲ್ಲಿ ಕಮಲದ ಬಾವುಟ ವಿಜೃಂಭಿಸಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಗೇರಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಆರಂಭದಿಂದಲೂ ಭಾರೀ ಅಂತರ ಕಾಯ್ದುಕೊಂಡಿದ್ದ ಕಾಗೇರಿ ಸುಮಾರು 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿAದ ಜಯಭೇರಿ ಬಾರಿಸಿದ್ದಾರೆ.
Also read: ಗಾಂಧಿನಗರದಲ್ಲಿ ಅಮಿತ್ ಶಾ ಜಯಭೇರಿ | ಅಬ್ಬಬ್ಬಾ! ಪಡೆದ ಲೀಡ್ ಎಷ್ಟು ನೋಡಿ
ಕಾಂಗ್ರೆಸ್’ನಿಂದ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ್ ಕಾಗೇರಿ ಅವರ ಮುಂದೆ ಮುಗ್ಗರಿಸಿದ್ದಾರೆ.
ಅಂಜಲಿ ನಿಂಬಾಳ್ಕರ್ ಅವರಿಗೆ ಕಳೆದ ಒಂದು ವರ್ಷದಲ್ಲಿ ಎದುರಾಗಿರುವ ಎರಡನೇ ಸೋಲು ಇದಾಗಿದ್ದು, ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























