ಕಲ್ಪ ಮೀಡಿಯಾ ಹೌಸ್ | ಉತ್ತರ ಪ್ರದೇಶ |
ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವ ಹಿನ್ನೆಲೆ ನೋಯ್ಡಾದಲ್ಲಿರುವ ಬೃಹತ್ ಅವಳಿ ಕಟ್ಟಡಗಳಾದ ಸೂಪರ್ ಟೆಕ್ ಮತ್ತು ಸಿಯಾನಿ ಗೋಪುರಗಳು ಸುಪ್ರಿಂ ಕೋರ್ಟ್ ಆದೇಶದಂತೆ ಇಂದು ನೆಲಸಮವಾಗಿದೆ.
ಕ್ರಮವಾಗಿ 103 ಮೀಟರ್ ಮತ್ತು 97 ಮೀಟರ್ ಎತ್ತರವಿದ್ದ ಈ ಗೋಪುರಗಳನ್ನು 2004ರಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ವರ್ಷಗಟ್ಟಲೆ ಹಲವಾರು ಕಾರ್ಮಿಕರ ಪರಿಶ್ರಮದಿಂದ ನಿರ್ಮಿಸಲಾದ ಈ ಕಟ್ಟಡ ಇಂದು ನೆಲಸಮವಾಗಿದೆ.
ಸೂಪರ್ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರ ಪರಿಣಾಮ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆದೇಶಿಸಿತ್ತು.
ಕಟ್ಟಡದ ಸುತ್ತಮುತ್ತ 7000 ಜನರು ವಾಸವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಹಾಗೂ ಕಾರ್ಯಾಚರಣೆ ವೇಳೆ ಎನ್‌ಡಿಆರ್‌ಎಫ್, ಸಿಬಿಆರ್‌ಐ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post