ಕಲ್ಪ ಮೀಡಿಯಾ ಹೌಸ್
ಉನ್ನಾವೋ: ಫೀಸ್ ಕಟ್ಟದೇ ಇದ್ದ ಕಾರಣ ಗುರುವಾರ ಶಾಲೆಯ ಪ್ರಾಂಶುಪಾಲರಿಂದ ಅವಮಾನಿತಳಾಗಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದಳಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿಯ ಕುಟುಂಬ ಉನ್ನಾವೋ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಪೋಷಕರ ಪ್ರಕಾರ, ಹುಡುಗಿ ಎಬಿ ನಗರದ ಸರಸ್ವತಿ ವಿದ್ಯಾ ಮಂದಿರದಲ್ಲಿ 10 ನೆಯ ತರಗತಿ ಓದುತ್ತಿದ್ದಳು. ಅವಳು ಅಳುತ್ತಾ ಮನೆಗೆ ಬಂದಳು ಮತ್ತು ಇದ್ದಕ್ಕಿದ್ದಂತೆ ಕುಸಿದಳು. ನಾವು ಅವಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದೆವು ಆದರೆ ವೈದ್ಯರು ಅವಳನ್ನು ಬದುಕಿಸುವಲ್ಲಿ ವಿಫಲರಾದರು ಎಂದು ಪೋಷಕರು ಮಾದ್ಯಮಗಳಿಗೆ ಹೇಳಿದರು.
ಬಾಕಿ ಇರುವ ಶುಲ್ಕವನ್ನು ಪಾವತಿಸುವಂತೆ ಶಾಲಾ ಆಡಳಿತವು ನಿಯಮಿತವಾಗಿ ಒತ್ತಡ ಹೇರುತ್ತಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇಂದು ನಮ್ಮ ಮಗಳು ಪ್ರಿನ್ಸಿಪಾಲರ ಬಳಿ ಶುಲ್ಕ ರಿಯಾಯಿತಿ ಕೋರಲು ಹೋಗಿದ್ದಳು. ಆದರೆ ಶಾಲೆಯ ಪ್ರಾಂಶುಪಾಲರು ಆಕೆಯ ಮನವಿಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಇತರ ವಿದ್ಯಾರ್ಥಿಗಳ ಮುಂದೆ ಆಕೆಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಎಂದು ಸಂತ್ರಸ್ತೆಯ ಚಿಕ್ಕಪ್ಪ ದೂರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post