ಕಲ್ಪ ಮೀಡಿಯಾ ಹೌಸ್ | ಉತ್ತರ ಕನ್ನಡ |
ಜಿಲ್ಲೆಯ ಭಟ್ಕಳದ ತಾಲೂಕಿನ ಮುಟ್ಟಳ್ಳಿಯಲ್ಲಿ ಭಾರೀ ಮಳೆಯ ಪರಿಣಾಮ ಬೃಹತ್ ಗುಡ್ಡವೊಂದು ಕುಸಿದಿದ್ದು, ಈ ಪ್ರದೇಶಕ್ಕೆ ಯಾರೂ ತೆರಳದಂತೆ ಸೂಚನೆ ನೀಡಲಾಗಿದೆ.
ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಇಲ್ಲಿನ ಬೃಹತ್ ಗುಡ್ಡವೊಂದು ಕುಸಿದಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಅಪಾಯ ಎದುರಾಗುವ ಹಿನ್ನೆಲೆಯಲ್ಲಿ 10 ಮನೆಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದ್ದು, ಮನೆಗಳನ್ನು ತಾಲೂಕು ಆಡಳಿತ ಖಾಲಿ ಮಾಡಿಸಿದೆ.
ಕಳೆದ ಕೆಲವು ದಿನದ ಹಿಂದೆ ಭಾರಿ ಮಳೆಯಿಂದ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದು ನಾಲ್ವರು ಅಸುನೀಗಿದ್ದರು. ಇಂದು ಮತ್ತೆ ಗುಡ್ಡ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
Also read: ಸಿಎಂ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್, ದೆಹಲಿ ಪ್ರವಾಸ ರದ್ದು, ಆರೋಗ್ಯ ವಿಚಾರಿಸಿದ ಬಿಎಸ್’ವೈ
ಗುಡ್ಡ ಕುಸಿತ ಪ್ರದೇಶಕ್ಕೆ ಯಾರೂ ತೆರಳದಂತೆ ಸೂಚನೆ ನೀಡಲಾಗಿದ್ದು, ಎಲ್ಲ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post