ಕಲ್ಪ ಮೀಡಿಯಾ ಹೌಸ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುಡ್ಲಮನೆ ಎಂಬಲ್ಲಿ ಅವಧಿ ಮೀರಿರುವ ಕ್ವಿಂಟಾಲ್ ಗಟ್ಟಲೆ ಚಾಕ್ಲೇಟ್‌ಗಳನ್ನು ಡೀಲರ್ ಒಬ್ಬರು ರಸ್ತೆಯಲ್ಲೇ ಎಸೆದು ಹೋಗಿರುವ ಘಟನೆ ನಡೆದಿದೆ.
ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಬಗೆಯ ಪ್ಲೇವರ್‌ಗಳ ಚಾಕ್ಲೇಟ್‌ಗಳು ಇದಾಗಿದ್ದು. ಕೊರೋನಾ ಲಾಕ್‌ಡೌನ್‌ನಿಂದಾಗಿ ಚಾಕ್ಲೇಟ್‌ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಈ ಕಾರಣದಿಂದ ಇದರ ಅವಧಿ ಮುಗಿದಿದ್ದು, ಕಂಪನಿಯ ಡೀಲರ್ ನಗರಸಭೆಯ ಕಸ ವಿಲೇವಾರಿಗೆ ಮಾಹಿತಿ ನೀಡದೆ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ.
ಹೀಗೆ ಎಸೆದ ಚಾಕ್ಲೇಟ್ ಅನ್ನು ದನಗಳು ತಿಂದಿವೆ. ಹಾಗೂ ಮಕ್ಕಳು ಕೂಡ ಎತ್ತಿಕೊಂಡು ಹೋಗಿದ್ದಾರೆ. ರಾಶಿಗಟ್ಟಲೆ ಚಾಕ್ಲೇಟ್‌ಗಳು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು, ಅಲ್ಲಿಯೇ ಕೆರೆ ಸಹ ಇರುವುದರಿಂದ ಮಳೆಯಲ್ಲಿ ಈ ನೀರಿಗೆ ಸೇರಿ ಮಲೀನವಾಗಲಿದೆ. ಹೀಗಾಗಿ ಸ್ಥಳೀಯ ಜನರು ಈ ಚಾಕ್ಲೇಟ್ ಕಂಪನಿ ಡೀಲರ್ ವಿರುದ್ಧ ನಗರಸಭೆಗೆ ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post