ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #PMNarendraModi ಸರ್ಕಾರದ ಕನಸಿದ ವಂದೇ ಭಾರತ್ ರೈಲು #BandeBharat ಸಂಚಾರ ದೇಶದ ಹಲವು ಮಾರ್ಗಗಳಲ್ಲಿ ಯಶಸ್ವಿಯಾಗಿ, ಜನಮೆಚ್ಚುಗೆಗೆ ಪಾತ್ರವಾಗಿರುವ ಬೆನ್ನಲ್ಲೇ ಇದೇ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ಕೋಚ್’ಗಳನ್ನೂ #SleeperCoach ಸಹ ಪರಿಚಯಿಸಲು ಸಿದ್ದತೆಗಳು ನಡೆದಿವೆ.
ಹೌದು… ವಿಮಾನ ಪ್ರಯಾಣದ #Flight ಅನುಭೂತಿ ನೀಡುವ ವಂದೇ ಭಾರತ್ ರೈಲು ಈಗಾಗಲೇ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಇಂತಹ ಅತ್ಯುನ್ನತ ದರ್ಜೆಯ ಈ ರೈಲಿನಲ್ಲಿ ಅತಿ ಶೀಘ್ರದಲ್ಲಿಯೇ ಸ್ಲೀಪರ್ ಕ್ಲಾಸ್ ಬೋಗಿಗಳನ್ನೂ ಸಹ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಈ ಕುರಿತಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ #AshwiniVaishnav ಟ್ವೀಟ್ ಮಾಡಿದ್ದು, 2024ಕ್ಕೂ ಮುನ್ನವೇ ಅಂದರೆ ಈ ವರ್ಷಾಂತ್ಯಕ್ಕೆ ವಂದೇ ಭಾರತ್ ರೈಲಿಗೆ ಸ್ಲೀಪರ್ ಕೋಚ್’ಗಳನ್ನು ಅಳವಡಿಸಲಾಗುತ್ತದೆ. ಇದಕ್ಕಾಗಿ ಸಿದ್ದತೆಗಳು ನಡೆದಿದ್ದು, ಅತಿ ಶೀಘ್ರದಲ್ಲೇ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದಿದ್ದಾರೆ.
ವಂದೇ ಭಾರತ್ ರೈಲಿನಲ್ಲಿ ಅಳವಡಿಸಲಾಗುವ ಸ್ಲೀಪರ್ ಕ್ಲಾಸ್ ಬೋಗಿಗಳ ವಿನ್ಯಾಸದ ಚಿತ್ರಗಳನ್ನು ಸಚಿವರು ಹಂಚಿಕೊಂಡಿದ್ದು, ಇವು ವಿಶ್ವದರ್ಜೆಯ ಹಂತದಲ್ಲಿವೆ.
ಈ ಕುರಿತಂತೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಟ್ವೀಟ್ ಮಾಡಿದ್ದು, ಸದ್ಯದಲ್ಲೇ ಬರ್ತಿದೆ, ವಂದೇಭಾರತ್ ಎಕ್ಸ್’ಪ್ರೆಸ್ಸಿನ ಸ್ಲೀಪರ್ ಮಾದರಿ ಟ್ರೈನುಗಳು! ಕೇವಲ ಹತ್ತು ವರ್ಷಗಳ ಹಿಂದೆ ಇಂಥವನ್ನೆಲ್ಲಾ ನಮ್ಮ ದೇಶದಲ್ಲಿ ಕಾಣುವುದು ಅಸಾಧ್ಯ ಅನ್ನುವ ಭಾವನೆಯಿತ್ತು! ಭಾರತ ಬದಲಾಗಿದೆ ಎಂದಿದ್ದಾರೆ.
Discussion about this post