ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ವಾಹನವೊಂದರ ಬ್ರೇಕ್ ಫೇಲ್ #BreakFail ಆದ ಕಾರಣ ಉಳಿದ ಎಲ್ಲಾ ವಾಹನಗಳ ಓಡಾಟಕ್ಕೆ ತೊಂದರೆಯಾಗಿ ಸಂಪೂರ್ಣ ಟ್ರಾಫಿಕ್ ಆಗಿರುವ
ಘಟನೆ ಆಗುಂಬೆ ಘಾಟಿಯಲ್ಲಿ #AgumbeGhat ಇಂದು ನಡೆದಿದೆ.
ತೀರ್ಥಹಳ್ಳಿ ಭಾಗದಿಂದ ಉಡುಪಿ ಕಡೆ ಹಾಗೂ ಉಡುಪಿ #Udupi ಕಡೆಯಿಂದ ತೀರ್ಥಹಳ್ಳಿ #Thirthahalli ಕಡೆಗೆ ಬರುವ ವಾಹನಗಳು ಕಳೆದ ಅರ್ಧಗಂಟೆಗೂ ಹೆಚ್ಚು ಕಾಲದಿಂದ ನಿಂತಲ್ಲಿಯೇ ನಿಂತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಇತ್ತ ಅದರ ನಡುವೆಯೇ ಆಂಬುಲೆನ್ಸ್’ಗಳು ಸಹ ಓಡಾಟ ನಡೆಸಲು ಪರದಾಟ ನಡೆಸುತ್ತಿವೆ. ಸ್ಥಳದಲ್ಲಿ ಪೊಲೀಸರು ಇದ್ದು ವಾಹನ ಓಡಾಟಕ್ಕೆ ಅನುವು ಮಾಡಿ ಕೊಡಲು ಹರ ಸಾಹಸ ಪಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post