ಹೈದರಾಬಾದ್: 180 ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಗೋ ವಿಮಾನ ಇಂದು ಇನ್ನೇನು ಟೇಕಾಫ್ ಆಗುವ ವೇಳೆ ಇದ್ದಕ್ಕಿಂದ್ದಂತೆ ರನ್ ವೇಗೆ ಅಪರಿಚಿತ ವಾಹನವೊಂದು ನುಗ್ಗಿದ್ದು, ಇದರಿಂದಾಗಿ ವಿಮಾನದ ತುರ್ತು ಬ್ರೇಕ್ ಹಾಕಿ ಮುಂದಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿರುವ ಘಟನೆ ನಡೆದಿದೆ.
ಇಂಡಿಗೋ ಏರ್ ಬಸ್ ಎ320-ವಿಮಾನ 6ಇ743ದ ಇಬ್ಬರು ಪೈಲೆಟ್‌ಗಳು ಇನ್ನೇನು ವಿಮಾನವನ್ನು ಟೇಕಾಫ್ ಮಾಡಬೇಕು ಎನ್ನುವಷ್ಟರಲ್ಲಿ ರನ್ ವೇಗೆ ಅಪರಿಚಿತ ವಾಹನವೊಂದು ನುಗ್ಗಿ ಬಂದಿದೆ. ಈ ಹಿನ್ನೆಲೆಯಲ್ಲಿ ವಾಹನಕ್ಕೆ ವಿಮಾನ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ತುರ್ತು ಬ್ರೇಕ್ ಹಾಕಿ ವಿಮಾನವನ್ನು ನಿಲ್ಲಿಸಲಾಗಿದೆ.
ಇಂದು ಮುಂಜಾನೆ 6 ಗಂಟೆಗೆ ಈ ಘಟನೆ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನ ನಡೆದಿದ್ದು, ವಿಮಾನ ಹೈದರಾಬಾದ್‌ನಿಂದ ಗೋವಾಗೆ ಹೊರಟಿತ್ತು.
ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
Discussion about this post