ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ವಿಜಯನಗರಕ್ಕೆ ಕೃಷ್ಣದೇವರಾಯರ ಮಾದರಿಯಲ್ಲಿ ಆಡಳಿತ ಬೇಕಿದ್ದು, ನನಗೆ ಇನ್ನೊಂದು ಅವಕಾಶ ನೀಡಿದರೆ ಅಭಿವೃದ್ಧಿ ಮಾಡಿ ತೋರಿಸುವೆ ಎಂದು ಸಚಿವ ಆನಂದ್ ಸಿಂಗ್ Anand Singh ಹೇಳಿದ್ದಾರೆ.
ಹೊಸಪೇಟೆಯ ಪಟೇಲ್ ನಗರದಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ತ್ರಿಮತಸ್ತ ಬ್ರಾಹ್ಮಣ ಸಮಾಜದವರ ಜೊತೆ ಸಮಾಲೋಚನೆ ಸಭೆಯನ್ನು ಆಯೋಜಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮಾಜದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ, ತಮ್ಮ ಸಮುದಾಯಕ್ಕೆ ಅಗತ್ಯ ಸೌಕರ್ಯ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಿದ್ಧಾರ್ಥ ಸಿಂಗ್ Siddarth Singh ಅವರು ಮಾತನಾಡಿ, ಮುಂದಿನ ಅವರ ಯೋಜನೆ, ಕನಸುಗಳನ್ನು ತಮ್ನ ಭಾಷಣದಲ್ಲಿ ತಿಳಿಸುತ್ತಾ ಬುದ್ದಿಜೀವಿಗಳಾದ ತಮ್ಮ ಸಮುದಾಯಕ್ಕೆ ಇವುಗಳನ್ನು ತಿಳಿಸುವುದು ಬೇಕಾಗಿಲ್ಲ. ಆದರೂ ನನ್ನ ಕರ್ತವ್ಯ ಎಲ್ಲಾ ವಿಚಾರ ತಿಳಿಸಿರುವೆ. ಬಿಜೆಪಿಗೆ ಮತ್ತೊಂದು ಅವಕಾಶ ನೀಡಿ ಇತಿಹಾಸದಲ್ಲಿ ಬೆರೆಯುವ ಹಾಗೆ ನಮ್ಮ ವಿಜಯನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ತೋರಿಸುವೆ ಎಂದು ತಿಳಿಸಿದರು.
ಅನಂದ್ ಸಿಂಗ್ ಅವರು, ಬ್ರಾಹ್ಮಣ ಸಮಾಜದ ಮುಖಂಡರು ಹೊಸಪೇಟೆ ಹುಡಾ ಅದ್ಯಕ್ಷ ಅಶೋಕ್ ಜಿರೆ ಮತ್ತು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಭಾಗವಹಿಸಿ ಸುಮಾರು ಒಂದು ಘಂಟೆಗಳ ಕಾಲ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಕ್ತ ಸಮಾಲೋಚನೆ ಮಾಡಿದರು.

ಅಶೋಕ ಜಿರೆ ಮತ್ತು ಹನುಮಂತರಾವ್ ಅವರು ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಸಮಾಜದ ಅಭಿವೃದ್ಧಿ ಅನಿವಾರ್ಯ ಕಾರಣ ಬ್ರಾಹ್ಮಣರಲ್ಲಿ ಅನೇಕ ಬಡತನ ಕುಟುಂಬದವರು ಇರುತ್ತಾರೆ. ಕಾರಣ ಅವರು ಆರ್ಥಿಕವಾಗಿ ಕಡು ಬಡತನದಲ್ಲಿ ಇದ್ದು ಉತ್ತಮ ವಿದ್ಯಾಭ್ಯಾಸ ಮಾಡಿರುತ್ತಾರೆ. ಇಂದಿನ ಮೀಸಲಾತಿ ಪದ್ದತಿಯಲ್ಲಿ ಅವರಿಗೆ ಸೀಟುಗಳು ಸಿಗುತ್ತಿಲ್ಲ. ಕಾರಣ ಈ ವ್ಯವಸ್ಥೆ ಸರಿಯಾಗಬೇಕಾಗಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಅಡುಗೆ ಸಂಘದ ಸದಸ್ಯರು ಮನವಿ ಪತ್ರ ನೀಡಿ ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ಹೊಸಪೇಟೆ ಬ್ರಾಹ್ಮಣ ಸಮಾಜ ಮತ್ತು ಅಡುಗೆ ಸಂಘದ ಎಲ್ಲಾ ಸದಸ್ಯರು ಸಿದ್ದಾರ್ಥ್ ಸಿಂಗ್ ಗೆ ಸನ್ಮಾನಿಸಲಾಯಿತು.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)











Discussion about this post