ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಇಂದು ಸಂಜೆ ವಿಧಿವಶರಾದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರು 2014ರಲ್ಲಿಯೇ ವಿಲ್ ಬರೆದಿಟ್ಟಿದ್ದು, ಇದನ್ನು ಇಂದು ತೆರೆದು ಓದಲಾಗಿದ್ದು, ಇದರಂತೆಯೇ ಅವರ ಅಂತಿಮ ಸಂಸ್ಕಾರ ನಡೆಯಲು ನಿರ್ಧಾರ ಮಾಡಲಾಗಿದೆ.
2014ರಲ್ಲಿಯೇ ವಿಲ್ ಬರೆದಿಟ್ಟಿದ್ದ ಸಿದ್ಧೇಶ್ವರ ಸ್ವಾಮಿಗಳು ಮಾದರಿ ಎನ್ನಬಹುದಾದ ವಿಚಾರಗಳನ್ನು ಬರೆದಿಟ್ಟಿದ್ದು, ಇದರಲ್ಲಿ ತಮ್ಮ ಅಂತಿಮ ಸಂಸ್ಕಾರದ ಕುರಿತಾಗಿ ಉಲ್ಲೇಖಿಸಿದ್ದಾರೆ.

ಯಾವುದು ಆ ನಾಲ್ಕು ಅಂಶಗಳು?
1. ತಮ್ಮ ದೇಹವನ್ನು ಭೂಮಿಯಲ್ಲಿ ಹೂಳದೇ ಅಗ್ನಿಸ್ಪರ್ಶ ಮಾಡಬೇಕು
2. ಶ್ರಾದ್ಧಿಕ ವಿಧಿವಿಧಾನಗಳ ಪಾಲನೆ ಅಗತ್ಯವಿಲ್ಲ
3. ಚಿತಾಭಸ್ಮವನ್ನು ಯಾವುದೇ ನದಿ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡಬೇಕು
4. ಯಾವುದೇ ಬಗೆಯ ಸ್ಮಾರಕಗಳನ್ನು ನಿರ್ಮಿಸಬಾರದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post