ಕಲ್ಪ ಮೀಡಿಯಾ ಹೌಸ್
ವಿಜಯಪುರ: ಜಿಲ್ಲೆಯ ನಾಲತವಾಡ ಪಟ್ಟಣದ ಗೋನಾಳ ಗ್ರಾಮದ ಮಹಿಳೆಯೋರ್ವರಿಗೆ ಪ್ರಸವ ವೇದನೆ ಆರಂಭವಾದ ಹಿನ್ನೆಲೆ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಗೋನಾಳ ಗ್ರಾಮದ ನಿವಾಸಿ ಕಾವೇರಿ ಹನುಮಂತ ಬಳಬಟ್ಟಿ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿ ನೋವು ಜಾಸ್ತಿಯಾದ ಪರಿಣಾಮ 108 ಆಂಬುಲೈನ್ಸ್‌ನಲ್ಲಿದ್ದ ಸಿಬ್ಬಂದಿಗಳು ಯಶಸ್ವಿಯಾಗಿ ಹೆರಿಗೆ ಮಾಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮುದ್ದೇಬಿಹಾಳ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಪ್ರಸವವೇದನೆ ವೇಳೆ ಸಹಾಯ ಮಾಡಿದ 108 ಸಿಬ್ಬಂದಿ ವರ್ಗಕ್ಕೆ ಕಾವೇರಿ ಸೇರಿದಂತೆ ಅವರ ಕುಟುಂಬದವರು ದನ್ಯವಾದಗಳನ್ನು ಹೇಳಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















