ಬೆಂಗಳೂರು: ಇಸ್ರೋ ವಿಜ್ಞಾನಿಗಳ ವರ್ಷಗಳ ಕನಸು ಹಾಗೂ ಹಗಲು ರಾತ್ರಿ ಊಟ, ನಿದ್ದೆಗೆಟ್ಟು ನಡೆಸಿದ ಪ್ರಯತ್ನ ಚಂದ್ರಯಾನ-2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್ ನಿಯಂತ್ರಣ ಕಳೆದುಕೊಂಡ ಹಿನ್ನೆಲೆಯಲ್ಲಿ ನಿರಾಸೆಗೊಂಡಿರುವ ಇಸ್ರೋ ಮುಖ್ಯಸ್ಥ ಕೆ. ಶಿವನ್ ತೀವ್ರ ನಿರಾಸೆಗೆ ಒಳಗಾಗಿದ್ದಾರೆ.
ಈ ವೇಳೆ ಬೆಂಗಳೂರಿನ ಇಸ್ರೋ ಕಂಟ್ರೊಲ್ ಸೆಂಟರ್ ಪ್ರಧಾನಿ ಮೋದಿ ಭೇಟಿ ನೀಡಿ, ಹಿಂತಿರುಗುವ ವೇಳೆ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ದುಃಖ ಉಮ್ಮಳಿಸಿ ಬಂದು ಶಿವನ್ ಅವರು ಗಳಗಳನೆ ಅತ್ತುಬಿಟ್ಟರು. ಈ ವೇಳೆ ಶಿವನ್ ಅವರನ್ನು ಆಲಂಗಿಸಿಕೊಂಡು, ಬೆನ್ನು ಸವರಿ ಸಮಾಧಾನ ಮಾಡಿದ ಪ್ರಧಾನಿ ಮೋದಿ ಧೈರ್ಯ ತುಂಬಿದರು. ಭಾರತದ ಎರಡನೇ ಚಂದ್ರನ ಕಾರ್ಯಾಚರಣೆಯ ಹಿಂದೆ ಹೋದ ಪ್ರಯತ್ನವನ್ನು ಪರಿಗಣಿಸಿ ಇದು ಭಾವನಾತ್ಮಕ ಕ್ಷಣವಾಗಿದೆ.
ಒಂದು ಯೋಜನೆಯೊಂದಿಗೆ ಈ ರೀತಿಯ ಭಾವನಾತ್ಮಕ ಅನುಬಂಧವನ್ನು ಹೊಂದಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರಂತರ ವಿಜ್ಞಾನಿಗಳನ್ನು ಹಾಗೂ ಇಂತಹ ಪ್ರಯತ್ನದಲ್ಲಿ ಹಿನ್ನಡೆಯಾದ ವೇಳೆ ಅವರ ಧೈರ್ಯಗೆಡೆದಂತೆ ಆತ್ಮಸ್ಥೈರ್ಯ, ಹೊಸ ಹುರುಪನ್ನು ತುಂಬುತ್ತಿರುವ ಪ್ರಧಾನಿಯವರನ್ನು ಪಡೆದ ತಾಯಿ ಭಾರತಿಯೇ ಧನ್ಯ….
#ನಮ್ಮ_ಇಸ್ರೋ_ನಮ್ಮ_ಹೆಮ್ಮೆ
#ನಮ್ಮ_ಪ್ರಧಾನಿ_ನಮ್ಮ_ಹೆಮ್ಮೆ
Discussion about this post