ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೆಲ್ಬೋರ್ನ್: ವಿಶ್ವದಾದ್ಯಂತ ಮಾರಕವಾಗಿ ಕಾಡುತ್ತಿರುವ ಕೋವಿಡ್ 19 ವೈರಸ್ ಸಾಲು ಸಾಲು ಬಲಿ ಪಡೆಯುತ್ತಿದ್ದು, ಸುಮಾರು 170ಕ್ಕೂ ಅಧಿಕ ರಾಷ್ಟ್ರಗಳು ಇದಕ್ಕೆ ತುತ್ತಾಗಿದೆ. ಮಾತ್ರವಲ್ಲ, ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಣೆ ಮಾಡಿವೆ.
ಇದರಂತೆ ಭಾರತದಲ್ಲೂ ಸಹ ಎಪ್ರಿಲ್ 14ರವರೆಗೂ ಇಡಿಯ ದೇಶಕ್ಕೇ ಲಾಕ್ ಡೌನ್ ಘೋಷಣೆ ಮಾಡಿದ್ದು, ಪರಿಸ್ಥಿತಿಯ ಭೀಕರತೆಯನ್ನು ಅರಿಯದೇ, ತತ್ಸಾರವಾಗಿ ಪರಿಗಣಿಸುತ್ತಿರುವ ಬಹಳಷ್ಟು ಮಂದಿ ಮನೆಯಿಂದ ಹೊರಬರುವುದು, ಗುಂಪು ಗುಂಪಾಗಿ ಸೇರುವಂತಹ ಕೆಲಸ ಮಾಡುತ್ತಾ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಇದೇ ವೇಳೆ ಭಾರತಕ್ಕಿಂತಲೂ ಭೀಕರ ಪರಿಸ್ಥಿತಿಯನ್ನು ಆಸ್ಟ್ರೇಲಿಯಾ ಎದುರಿಸುತ್ತಿದ್ದು, ಇತ್ತೀಚೆಗಷ್ಟೇ ಭೀಕರ ಕಾಡ್ಗಿಚ್ಚಿನಿಂದ ತತ್ತರಿಸಿದ್ದ ಆ ದೇಶಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಂತಹ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದ ಕನ್ನಡತಿ ಶುಭ್ರತಾ ರಾಮದಾಸ್ ಅವರು, ಕೋವಿಡ್ 19ನಿಂದಾಗಿರುವ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿ, ಭಾರತೀಯರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಇದರ ಎಕ್ಸ್’ಕ್ಲೂಸಿವ್ ವೀಡಿಯೋವನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಆತ್ಮೀಯರಾದ ಅನಿರೀತ್ ಅವರ ಮೂಲಕ ಹಂಚಿಕೊಂಡಿದ್ದು, ವೀಡಿಯೋ ಇಂತಿದೆ. ಅಲ್ಲದೇ, ವೀಡಿಯೋದಲ್ಲಿ ಶುಭ್ರತಾ ಅವರು ವಿವರಿಸಿರುವ ಪ್ರಮುಖವಾಗಿ ಅಂಶಗಳನ್ನು ವೀಡಿಯೋ ಕೆಳಗೆ ಹಾಕಲಾಗಿದೆ.
ಪ್ರತಿ ಕರುನಾಡಿಗರನ್ನೂ ಎಚ್ಚರಿಸುವ ವಿಚಾರಗಳಿವು:
- ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆ ಅಂದಾಜು 2.5 ಕೋಟಿ ಆದರೆ, ಕರ್ನಾಟಕದ ಜನಸಂಖ್ಯೆ 6.41 ಕೋಟಿ. ಅಂದರೆ, ಆಸ್ಟ್ರೇಲಿಯಾದ ಜನಸಂಖ್ಯೆಯ ಅರ್ಧಕ್ಕಿಂತಲೂ ಕಡಿಮೆ.
- 2020ರ ಜನವರಿ 25ರಂದು ಆಸ್ಟ್ರೇಲಿಯಾದಲ್ಲಿ ಕೋವಿಡ್ 19 ಮೊದಲ ಪ್ರಕರಣ ಪತ್ತೆಯಾದ ನಂತರ ಈವರೆಗೂ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
- ಪಾಸಿಟಿವ್ ರೋಗಿಗಳ ಸಂಖ್ಯೆ 3800 ಆಗಿದ್ದು, ಸಾವಿಗೀಡಾದವರು 14 ಆಗಿದೆ.
- ನೆನಪಿಡಿ: ಆಸ್ಟ್ರೇಲಿಯಾದಲ್ಲಿ ಕೋವಿಡ್ 19 2ನೆಯ ಹಂತದಲ್ಲಿದ್ದು, ಭಾರತ ಮೂರನೆಯ ಹಂತದ ಹೊಸ್ತಿಲಲ್ಲಿ ಹೆಜ್ಜೆಯಿಟ್ಟಿದೆ.
- ಆಸ್ಟ್ರೇಲಿಯಾದಲ್ಲಿ ತೀರಾ ಅಗತ್ಯ ವಸ್ತುಗಳ ಸರಬರಾಜು ಹೊರಗಾಗಿ ಕಡ್ಡಾಯವಾಗಿ ಯಾರೂ ಮನೆಯಿಂದ ಹೊರಕ್ಕೆ ಬರುವಂತಿಲ್ಲ.
Get in Touch With Us info@kalpa.news Whatsapp: 9481252093
Discussion about this post