ಕಲ್ಪ ಮೀಡಿಯಾ ಹೌಸ್ | ವಿಶಾಖಪಟ್ಟಣಂ |
ನಿರಂತರವಾಗಿ 2 ಪಂದ್ಯಗಳಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ #Delhi Capitals ತಂಡದ ನಾಯಕ ರಿಷಭ್ ಪಂತ್’ಗೆ #Rishab Pant 24 ಲಕ್ಷ ರೂ. ದಂಡವನ್ನು ಬಿಸಿಸಿಐ ವಿಧಿಸಿದೆ.
ಏಪ್ರಿಲ್ 3 ರಂದು ವಿಶಾಖಪಟ್ಟಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓರ್ವ ಕಾಯ್ದುಕೊಂಡಿದ್ದಕ್ಕಾಗಿ ಪಂತ್ ತಪ್ಪಿತಸ್ಥರಾಗಿದ್ದಾರೆ. ಇದರೊಂದಿಗೆ ಉಳಿದ ಆಟಗಾರರಿಗೆ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ.

Also read: ಗಮನಿಸಿ! ಏಪ್ರಿಲ್ 4ರಿಂದ ನಾಲ್ಕು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್’ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಎರಡನೇ ಅಪರಾಧವಾಗಿರುವುದರಿಂದ, ಪಂತ್’ಗೆ ರೂ. 24 ಲಕ್ಷದಂಡ ವಿಧಿಸಲಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತ್ತಾ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 272 ರನ್ ಹೊಡೆದಿತ್ತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 17.2 ಓವರ್’ಗಳಲ್ಲಿ 166 ರನ್’ಗಳಿಗೆ ಆಲೌಟ್ ಆಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post