ಶ್ರೀನಗರ: ವೀರತ್ವದಿಂದಲೇ ಹೆಸರಾಗಿರುವ ಭಾರತೀಯ ಸೇನೆ ಈಗ ಮತ್ತೊಂದು ಸಾಹಸ ಮರೆದಿದ್ದು, ಎಂತಹ ಚಳಿಯನ್ನೂ ಸಹ ಲೆಕ್ಕಿಸದೇ ಇಂದು ಮುಂಜಾನೆ ಇಬ್ಬರು ಪಾಕ್ ಯೋಧರನ್ನು ಬೇಟೆಯಾಡಿ ಬಲಿ ಹಾಕಿದ್ದಾರೆ.
ನೌಗಾಮ್ ಸೆಕ್ಟರ್ ನಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನೆಯ ಬಾರ್ಡರ್ ಆಕ್ಷನ್ ಟೀಂನ ಸೈನಿಕರು ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದರು. ಈ ಮಾಹಿತಿಯನ್ನು ಅರಿತ ಭಾರತೀಯ ಯೋಧರು, ತತಕ್ಷಣ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಪ್ರಸಕ್ತ ಪ್ರದೇಶದಲ್ಲಿ ರಕ್ತವನ್ನೂ ಸಹ ಹೆಪ್ಪುಗಟ್ಟಿಸುವಂತಹ ಚಳಿ ಕೊರೆಯುತ್ತಿತ್ತು. ಈ ವೇಳೆ ಪಾಕಿಸ್ತಾನಿ ಸೈನಿಕರು ತಪ್ಪಿಸಿಕೊಳ್ಳಲು ದಟ್ಟಾರಣ್ಯದೊಳಗೆ ಓಡಿ ಹೋಗಿದ್ದಾರೆ. ಶಂಕಿತರನ್ನು ಹಿಂಬಾಲಿಸಿದ ಸೈನಿಕರು ದಟ್ಟಾರಣ್ಯದಲ್ಲಿ ಪಾಕ್ ಸೈನಿಕರನ್ನು ಅಟ್ಟಾಡಿಸಿ, ಪ್ರಾಣಿಗಳನ್ನು ಬೇಟೆಯಾಡುವಂತೆ ಬೇಟೆಯಾಡಿದ್ದಾರೆ.
ಇನ್ನು, ಮೃತರಿಂದ ಭಾರೀ ಪ್ರಮಾಣದ ಶಸ್ತಾçಸ್ತçಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಸಾಕಷ್ಟು ದಿನಗಳಿಂದಲೇ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಮತ್ತು ಉಗ್ರರು ಸಂಚು ಹೆಣೆದಿದ್ದು, ಇದೇ ಕಾರಣಕ್ಕೆ ದಟ್ಟಾರಣ್ಯದಲ್ಲಿ ರಹಸ್ಯ ಬಂಕರ್ ನಿರ್ಮಾಣ ಮಾಡಿರುವ ಸಾಧ್ಯತೆ ಇದೆ ಎಂದು ಸೇನೆ ಶಂಕೆ ವ್ಯಕ್ತಪಡಿಸಿದೆ.
















