ನವದೆಹಲಿ: 72ನೆಯ ಸ್ವಾತಂತ್ರೋತ್ಸವದ ಹೊಸ್ತಿಲಲ್ಲಿರುವ ದೇಶ, ನಾಳಿನ ಸಂಭ್ರಮಕ್ಕೆ ಸಜ್ಜಾಗಿರುವ ವೇಳೆ, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಹಲವೆಡೆ ಲೈವ್ ಆಗಲಿದೆ.
ನಾಳೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಗೂಗಲ್ ಹೋಮ್ ಪೇಜ್ ಹಾಗೂ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಗೂಗಲ್ ಹೋಮ್ ಪೇಜ್‌ನಲ್ಲಿ ಲೈವ್ ನೀಡಲು ಪ್ರಸಾರ ಭಾರತಿ ಅಮೆರಿಕಾದ ಟೆಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಪ್ರಸಾರ ಭಾರತಿ ಸಿಇಒ ಶಶಿ ಶೇಖರ್, ಇಷ್ಟು ವರ್ಷ ಸ್ವಾತಂತ್ರ ದಿನದ ಕಾರ್ಯಕ್ರಮ ಟಿವಿಯಲ್ಲಿ ನೇರಪ್ರಸಾರವಾಗುತ್ತಿತ್ತು. ಇದೀಗ ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತಿದೆ ಮತ್ತು ಗೂಗಲ್ ಸರ್ಚ್ ಇಂಜಿನ್ ನ ಹೋಮ್ ಪೇಜ್ ನಲ್ಲಿ ಸಹ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದ್ದೇವೆ ಎಂದಿದ್ದಾರೆ.
ನಾಳೆಯ ಕಾರ್ಯಕ್ರಮ ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಗಾಯನದೊಂದಿಗೆ ಆರಂಭವಾಗಲಿದೆ. ಸ್ವಾತಂತ್ರ್ಯ ದಿನದ ಬಗೆಗೆ ಯಾರೇ ಹುಡುಕಿದರೆ (ಗೂಗಲ್ ಸರ್ಚ್ ಮಾಡಿದರೆ) ಅವರು ಮೋದಿಯವರ ಭಾಷಣದ ಲೈವ್ ನೋಡಲು ಸಾಧ್ಯವಿದೆ.ಈ ಲೈವ್ ಸ್ಟ್ರೀಮಿಂಗ್ ಲಿಂಕ್ ಪುಟದ ಮೇಲ್ಭಾಗದಲ್ಲೇ ಕಾಣಿಸಿಕೊಳ್ಳುವ ಕಾರಣ ವಿಸಿಬಿಲಿಟಿ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
Discussion about this post