ಭೋಪಾಲ್: ಸಾಮಾನ್ಯವಾಗಿ ಯುವ ಹುಡುಗಿಯರು ಹಾಗೂ ಹುಡುಗಿಯರ ಡ್ಯಾನ್ಸ್‍ಗಳು ಜನರನ್ನು ಹುಚ್ಚೆಬ್ಬಿಸುತ್ತವೆ. ಆದರೆ, ಇಲ್ಲಿ ನೋಡಿ ಮಧ್ಯವಯಸ್ಕ ಅಂಕಲ್ ಒಬ್ಬರು ಮಾಡಿರುವ ಡ್ಯಾನ್ಸ್ ಇಂಟರ್ ನೆಟ್‍ನಲ್ಲಿ ಸಂಚಲನ ಸೃಷ್ಠಿಸಿದ್ದು, ಧೂಳೆಬ್ಬಿಸುತ್ತಿದೆ.
ಮಧ್ಯಪ್ರದೇಶದ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಎನ್ನುವವರು ಮಾಡಿರುವ ಡ್ಯಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ಯಾನ್ಸಿಂಗ್ ಅಂಕಲ್ ಎಂಬ ಅಡಿಬರಹದೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಮಾಡಿದ್ದು ಇದೀಗ ಈ ವಿಡಿಯೋ ರಾತ್ರೋರಾತ್ರಿ ವೈರಲ್ ಆಗಿದೆ. ಅಲ್ಲದೆ ಟ್ವೀಟರ್ ನಲ್ಲಿ ಅಂಕಲ್ ನೃತ್ಯಕ್ಕೆ ಯಾರೂ ಸರಿಸಾಟಿಯಿಲ್ಲ ಎಂಬ ರೀತಿಯಲ್ಲಿ ಸಂದೇಶಗಳನ್ನು ಬರೆಯುತ್ತಿದ್ದಾರೆ.
ಆಪ್ ಕೆ ಆ ಜಾನೇ ಸೇ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದು, ಸ್ವತಃ ಬಾಲಿವುಡ್ ಸ್ಟಾರ್ ಗೋವಿಂದಾ ಕೂಡ ನಾಚುವಂತೆ ಡಾನ್ಸ್ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ತಮ್ಮ ಮಡದಿಯೊಂದಿಗೆ ಸ್ಟೇಜ್ ಏರಿ ಸುಮ್ಮನೆ ಕುಣಿದ ಕುಣಿತ ಇಂದು ಅವರಿಗೆ ಭಾರಿ ಪ್ರಸಿದ್ಧಿ ಒದಗಿಸಿಕೊಟ್ಟಿದೆ. ನನ್ನ ಡಾನ್ಸ್ ವಿಡಿಯೋ ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದ, ನನ್ನ ಡಾನ್ಸ್ ವಿಡಿಯೋ ವೈರಲ್ ಆದ ನಂತರ ನನಗೆ ಹೆಚ್ಚಿನ ಅವಕಾಶಗಳು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ ಡ್ಯಾನ್ಸ್ ಅಂಕಲ್.
Discussion about this post