ಮಂತ್ರಾಲಯ: ಕಲಿಯುಗ ಕಾಮಧೇನು, ನಂಬಿದವರ ಪಾಲಿನ ಕಲ್ಪವೃಕ್ಷ ಎಂದೇ ಖ್ಯಾತರಾಗಿರುವ ಕರುಣೆಯ ಬೆಳಕು ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರವಾವಿದೆ.
ನಂಬಿ ಬಂದ ಭಕುತರ ಪಾಲಿನ ಗುರುರಾಯರ ಪವಾಡಗಳು ಕಲಿಯುಗದಲ್ಲಿ ಲಕ್ಷಾಂತರ ಮಂದಿಯ ಅನುಭವಕ್ಕೆ ಬಂದಿದ್ದು, ಇಂತಹ ಸಾಲಿಗೆ ಈಗ ಹೊಸ ಘಟನೆಯೊಂದು ನಡೆದಿದೆ.
ನಕಾರತ್ಮಕ ಶಕ್ತಿ ಹಿಡಿದಿದ್ದ ಮಹಿಳೆಯೊಬ್ಬರು ರಾಯರ ಪವಾಡದಿಂದ ಗುಣಮುಖರಾದ ಕುರಿತಾಗಿನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಗಾಗಲೇ ಇದನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ.
ನಕಾರಾತ್ಮಕ ಶಕ್ತಿ ಹಿಡಿದಿದ್ದ ಮಹಿಳೆಯೊಬ್ಬರನ್ನು ಆಕೆಯ ಕುಟುಂಬಸ್ಥರು ಮಂತ್ರಾಲಯ ಮಠಕ್ಕೆ ಕರೆದುಕೊಂಡು ಬಂದು ಅನುಗ್ರಹ ಮಾಡುವಂತೆ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥಶ್ರೀಪಾದಂಗಳವರಿಗೆ ಅರಿಕೆ ಮಾಡಿಕೊಳ್ಳುತ್ತಾರೆ.
ಈಕೆಯ ವರ್ತನೆಯನ್ನು ಗಮನಿಸಿದ ಶ್ರೀಗಳು ಆಕೆಗೆ ತೀರ್ಥ ನೀಡುತ್ತಾರೆ. ಆನಂತರ ಈಕೆಯ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಗುರು ರಾಯರಲ್ಲಿ ಪ್ರಾರ್ಥನೆ ಮಾಡಿದ ಸುಬುಧೇಂದ್ರ ಶ್ರೀಗಳು ಆಕೆಯ ಕೈಗೆ ಮಂತ್ರಾಕ್ಷತೆಯನ್ನು ಅನುಗ್ರಹಿಸುತ್ತಾರೆ.
ರಾಯರ ಅನುಗ್ರಹ ಪಡೆದ ಮಂತ್ರಾಕ್ಷತೆ ಮಹಿಳೆಯನ್ನು ಸೋಕಿದಾಕ್ಷಣ ಆಕೆ ಗುಣಮುಖರಾದಂತೆ ಕಂಡುಬಂದಿದ್ದು, ಆಕೆಯ ವರ್ತನೆ ಸಹಜವಾಗಿದೆ.
ಈ ಘಟನೆಯನ್ನು ಕಣ್ಣಾರೆ ಕಂಡ ನೆರೆದಿದ್ದ ಭಕ್ತವೃಂದ ಇದು ಗುರುಸಾರ್ವಭೌಮರ ಪವಾಡವೇ ಹೌದು ಎಂದು ರಾಘವೇಂದ್ರ ಸ್ವಾಮಿಗಳ ಪಾದಾರವಿಂದಕ್ಕೆ ಎರಗಿದ್ದಾರೆ.
ವೀಡಿಯೋ ನೋಡಿ:
Discussion about this post