ಬೆಂಗಳೂರು: ಸ್ಯಾಂಡಲ್’ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಆತ್ಮೀಯರಿಗೆ ಕೊಡಲು ಸಿದ್ದಪಡಿಸಿರುವ ಆಮಂತ್ರಣ ಪತ್ರಿಕೆ ಗಾಂಧಿನಗರದಲ್ಲಿ ಸುದ್ದಿಗೆ ಕಾರಣವಾಗಿದೆ.
ಉದ್ಯಮಿ ಅಜಯ್ ಅವರೊಂದಿಗೆ ರವಿಚಂದ್ರನ್ ಪುತ್ರಿ ಗೀತಾಂಜಲಿ ಅವರ ವಿವಾಹ ಮೇ 28ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ತಮ್ಮ ಮಗಳ ವಿವಾಹಕ್ಕೆ ಸ್ಯಾಂಡಲ್’ವುಡ್ ಮಂದಿಯನ್ನು ಸ್ವತಃ ಕ್ರೇಜಿಸ್ಟಾರ್ ಅವರೇ ಆಮಂತ್ರಿಸುತ್ತಿದ್ದಾರೆ. ಹೀಗಾಗಿ, ಕರೆಯೋಲೆಯನ್ನು ಅವರೇ ಖುದ್ಧು ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದಾರೆ ರವಿಮಾಮ.
ಸಿನಿಮಾದಂತೆ ಮಗಳ ಮದುವೆಯೂ ಕಲರ್ ಫುಲ್ ಆಗಿ ಮಾಡುವ ಯೋಜನೆಯಿಂದ ಈ ರೀತಿ ವಿಶೇಷವಾಗಿ ಆಮಂತ್ರಣ ಪತ್ರಿಕೆ ಸಿದ್ದಪಡಿಸಿದ್ದು, ಈ 3ಡಿ ಇನ್ವಿಟೇಷನ್ ಜೊತೆ ದುಬಾರಿ ಗಿಫ್ಟ್ ಕೊಟ್ಟು ಅತಿಥಿಗಳಿಗೆ ಆಹ್ವಾನ ನೀಡುತ್ತಿದ್ದಾರೆ. ಅಂದಹಾಗೆ ಒಂದು ಇನ್ವಿಟೇಷನ್ ಬೆಲೆ 5 ರಿಂದ 7 ಸಾವಿರ ರೂಪಾಯಿಗಳು ಎಂದು ತಿಳಿದುಬಂದಿದೆ.

















