ಬೆಂಗಳೂರು: ಚಿತ್ರರಂಗದ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ.. ನಾವೆಲ್ಲರೂ ಸುದೀಪ್ ಜೊತೆಯಲ್ಲಿದ್ದು, ಅವರು ಎಲ್ಲಿ ಕರೆದರೂ ಹೋಗಿ ಕ್ರಿಕೇಟ್ ಆಡುತ್ತೇವೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕ್ರಿಕೆಟ್ ಅಂದ್ರೆ ನನಗೆ ಬಹಳ ಇಷ್ಟ. ನಾನು ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಕೆಸಿಸಿ ಅಲ್ಲಿ ಆಡುತ್ತಿದ್ದೀನಿ ಎಂದಿದ್ದಾರೆ.
ಜಿ.ಆರ್. ವಿಶ್ವನಾಥ್ ಅಂದರೆ ನನಗೆ ಬಹಳ ಇಷ್ಟ. ನಾನು ಚಿಕ್ಕಂದಿನಿಂದಲೂ ಅವರ ಅಭಿಮಾನಿ. ಚೆನ್ನೈ ಅಲ್ಲಿ ಇದ್ದಾಗಲೂ ಬೆಂಗಳೂರು, ಮುಂಬೈ ಬಂದು ಕ್ರಿಕೆಟ್ ನೋಡುತ್ತಿದ್ದೆ. ಕಳೆದ ಬಾರಿ ಎರಡು ದಿನ ಅಭ್ಯಾಸ ಮಾಡಿ ಆಡಿದ್ದೆ. ಈ ಬಾರಿ ಬಹಳ ಅಭ್ಯಾಸ ನಡೆಸಿ ಬಹಳ ಸೀರಿಯಸ್ಸಾಗಿ ಆಡುತ್ತಿದ್ದೇನೆ. ಸುದೀಪ್ ಗೆ ಜೊತೆ ಇದ್ದೇವೆ ಅವರು ಎಲ್ಲೆ ಕರೆದರೂ ಹೋಗಿ ಆಡುತ್ತೇವೆ. ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ ಎಂದಿದ್ದಾರೆ.
Discussion about this post