ನವದೆಹಲಿ: ಮೋದಿ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಯುಪಿಎಗೆ ಜನಾದೇಶವಿದೆ ಎಂದು ನಾವು ಒಪ್ಪಿಕೊಂಡಿದ್ದೇವು ಎಂದು ಹೇಳುವ ಮೂಲಕ ಅವಿಶ್ವಾಸ ಮಂಡಿಸಿದ ಪ್ರತಿಪಕ್ಷಗಳಿಗೆ ಮಾತಿನ ಚಾಟಿ ನೀಡಿದರು.
After 15 years, a #NoConfidenceMotion has been moved against a govt. We never moved a no-confidence motion in ten years when Congress was in power because we understood that the Congress had people's mandate: Union minister Rajnath Singh pic.twitter.com/UNdQOn5Y1D
— ANI (@ANI) July 20, 2018
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ವಿಚಾರಗಳಿರಲಿ ನಾವು ಅವಿಶ್ವಾಸ ನಿರ್ಣಯದ ಮಟ್ಟಕ್ಕೆ ಹೋಗಿರಲಿಲ್ಲ. ಆದರೆ, ಈಗ ಅವಿಶ್ವಾಸ ನಿರ್ಣಯ ಮಂಡಿಸಿದರೆ ತಮಗೆ ಸೋಲಾಗುತ್ತದೆ ಎಂದು ಗೊತ್ತಿದ್ದರೂ ಸಹ ಮಂಡಿಸುವ ಮೂಲಕ ಪ್ರತಿಪಕ್ಷಗಳು ದಾರ್ಷ್ಟ್ರ್ಯ ಮೆರೆದಿದೆ ಎಂದರು.
Discussion about this post