ನವದೆಹಲಿ: ರಾಷ್ಟ್ರ ಕಂಡ ಧೀಮಂತ ಮಹಿಳಾ ನಾಯಕಿ, ಮಾಜಿ ಕೇಂದ್ರ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇಂದು ವಿಧಿವಶರಾಗಿದ್ದು, ಇಡಿಯ ದೇಶವೇ ದುಃಖದಲ್ಲಿ ಮುಳುಗಿದೆ.
ತಮ್ಮ ಜೀವಮಾನದುದ್ದಕ್ಕೂ ರಾಷ್ಟ್ರಕ್ಕಾಗಿನ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಸುಷ್ಮಾ ಓರ್ವ ಖಟ್ಟರ್ ರಾಷ್ಟ್ರೀಯವಾದಿ ನಾಯಕಿಯಾಗಿದ್ದರು.
ಜಮ್ಮು ಕಾಶ್ಮೀರ ಸಮಸ್ಯೆ ವಿಚಾರವನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದ ಅವರು, ಇದಕ್ಕಾಗಿ ನಡೆದ ಹಿಂದಿನ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಆರ್ಟಿಕಲ್ 370 ಹಾಗೂ 35ಎ ರದ್ದಾಗಬೇಕು ಎಂಬ ಸುಷ್ಮಾ ಕಂಡ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ನನಸು ಮಾಡಿದ್ದರು.
ಈ ಸಂಭ್ರಮವನ್ನು ಅವರು ಕೊನೆಯುಸಿರೆಳೆಯುವ ಕೇವಲ ಮೂರು ಗಂಟೆ ಮುನ್ನ ತಮ್ಮ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದರು.
ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿ ಜಿ. ನನ್ನ ಇಡಿಯ ಜೀವಮಾನ ಈ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೆ ಎಂದು ಸಂತಸ ಹಂಚಿಕೊಂಡಿದ್ದರು.
ಆದರೆ, ದುರಾದೃಷ್ಠವಷಾತ್ ಅವರು ಈ ಟ್ವೀಟ್ ಮಾಡಿದ ಕೇವಲ ಮೂರು ಗಂಟೆಗಳಲ್ಲಿ ತಮ್ಮ ಇಹದ ಕರ್ತವ್ಯ ಮುಗಿಸಿ, ತಾಯಿ ಭಾರತಿಯ ಪಾದಪದ್ಮಗಳಲ್ಲಿ ಲೀನವಾಗಿದ್ದಾರೆ.
Discussion about this post