ಕಲ್ಪ ಮೀಡಿಯಾ ಹೌಸ್ | ನಾದ ಕಲ್ಪ ವಿಶೇಷ ಲೇಖನ |
ಹೆಸರಾಂತ ವೈಲಿನ್ ವಾದಕರಾಗಿದ್ದ ದಿವಂಗತ ಟಿ. ಚೌಡಯ್ಯ #TChowdaiah ಅವರ ಆವಿಷ್ಕಾರ ವಿಶೇಷ ಏಳು ತಂತಿಯ ವಯೋಲಿನ್. ಈ ವಯೋಲಿನ್’ನಲ್ಲಿ ಮೊದಲ ಮೂರು ತಂತಿಗಳೂ ದ್ವಿಗುಣವಾಗಿ ಅಳವಡಿಸಲಾಗಿದ್ದು ನಾದವನ್ನು ಹೆಚ್ಚಿಸಬಲ್ಲದು.
ಪಾಶ್ಚಾತ್ಯ ಸಂಗೀತ ವಾದ್ಯಗಳ #MusicalInstrument ತಯಾರಕರಾಗಿದ್ದ ಮಾರ್ಕ್ ವುಡ್ ಏಳು ತಂತಿ ವೈಲಿನ್ ಮೊದಲಿಗೆ ತಯಾರಿಸಿರುವ ಮಾಹಿತಿ ಇದೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಇದನ್ನು ತಂದಿರುವ ಹೆಮ್ಮೆಯ ಕೊಡುಗೆ ವಿ.ಟಿ. ಚೌಡಯ್ಯನವರಿಗೆ ಸಲ್ಲುತ್ತದೆ. ಏಳು ತಂತಿ ವಯೋಲಿನ್ #Violin ನುಡಿಸಬಲ್ಲ ವಿದ್ವಾಂಸರು ಅತಿ ವಿರಳ.
Also Read>> ಮಂಡ್ಯ | ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಭೀಕರ ಆತ್ಮಹತ್ಯೆ | ದೇಹ ಛಿದ್ರ-ಛಿದ್ರ | ಕಾರಣವೇನು?
ವಯೋಲಿನ್ ಮಾಂತ್ರಿಕ ಸಂಗೀತ ವಿದ್ಯಾ ಸಾಗರ ದಿವಂಗತ ಶ್ರೀ ಆರ್.ಆರ್. ಕೇಶವಮೂರ್ತಿಗಳು ಹಿರಿಯ ಕಲಾವಿದರೂ ಗುರುಗಳೂ ಆಗಿ ಈ ಏಳು ತಂತಿ ವೈಲಿನ್ ಕಲಿಸುತ್ತಿದ್ದರು. ಇವರಿಂದ ಕಲಿತು ಈ ವಾದ್ಯದ ವಿಶೇಷತೆಗಳನ್ನು ಉಳಿಸಿಕೊಂಡು ಹೆಚ್ಚಿನ ಸಾಧನೆಯ ಹಾದಿಯಲ್ಲಿ ತೊಡಗಿರುವವರು, ನಮ್ಮ ನಾಡಿನ ಹೆಮ್ಮೆಯ ಕಲಾವಿದೆ ಜ್ಯೋತ್ಸ್ನಾ ಮಂಜುನಾಥ್. #JyotsnaManjunathಜ್ಯೋತ್ಸ್ನಾ ಅವರು ಎಲ್‌ಐಸಿ #LIC ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಶ್ರೀಮತಿ ವಿ. ಭಾಗ್ಯಲಕ್ಷ್ಮೀ ಮತ್ತು ಶ್ರೀ ಕಡಬ ಸುಬ್ರಹ್ಮಣ್ಯ ಅವರ ಸುಪುತ್ರಿ.
ಅವರು ತಮ್ಮ 8 ನೇ ವಯಸ್ಸಿನಲ್ಲಿ ಏಳು ತಂತಿಗಳ ವಯೋಲಿನ್ ಕಲಿಕೆಯನ್ನು ಶ್ರೀಯುತ ಆರ್.ಆರ್. ಕೇಶವಮೂರ್ತಿಗಳಲ್ಲಿ ಪ್ರಾರಂಭಿಸಿದರು.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಹಿರಿಯ ಕಲಾವಿದರಿಗೆ ಸಹಕಾರ ನೀಡುತ್ತಿರುವ ದೇಡಿಕೆಯ ಕಲಾವಿದೆ. ವಯೋಲಿನ್ ಸೋಲೋ ಕಛೇರಿಗಳಲ್ಲಿ ಸಹ ಏಳು ತಂತಿ ವಯೋಲಿನ್ ನುಡಿಸುತ್ತಾರೆ. ಬೆಂಗಳೂರಿನ ಸಂಗೀತ ನೃತ್ಯ ಅಕಾಡೆಮಿಯಿಂದ ರಾಜ್ಯ ವಿದ್ಯಾರ್ಥಿವೇತನ ಪಡೆದು, AIR ಮತ್ತು ದೂರದರ್ಶನ, ಬೆಂಗಳೂರಿನ B-ಹೈ ಗ್ರೇಡ್ ಕಲಾವಿದರಾಗಿರುವರು. ಪಿಟೀಲು ವಾದ್ಯ ಕಲಾಭೂಷಣ, ವಂಶಿ ಪುರಸ್ಕಾರ, ಅನನ್ಯ ಯುವ ಪುರಸ್ಕಾರ ಪ್ರಶಸ್ತಿಗಳು ಇವರಿಗೆ ಸಂದಿವೆ.
ಇತ್ತೀಚಿನ ಇವರ ಮೇರು ಸಾಧನೆಗಳು, ದಿ.ಶ್ರೀ ಮೈಸೂರು ಟಿ. ಚೌಡಯ್ಯನವರ ಜನ್ಮ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಅಕಾಡೆಮಿ ಆಫ್ ಮ್ಯೂಸಿಕ್’ನಿಂದ ಏಳು ತಂತಿಗಳ ಪಿಟೀಲು ನುಡಿಸುವ ಕಲೆಯ ಸಂರಕ್ಷಣೆ ಮತ್ತು ಪರಿಣತಿಗಾಗಿ ವಿದ್ಯಾರ್ಥಿ ವೇತನ ಪಡೆದಿದ್ದಾರೆ.
ವೃತ್ತಿಯಲ್ಲಿ ಆದಾಯ ತೆರಿಗೆಯ #IncomeTax ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತ ಅಲ್ಲಿಯೂ ತಮ್ಮ ಸಂಗೀತ ಕ್ಷೇತ್ರದ ಕೊಡುಗೆಯನ್ನು ಗುರುತಿಸಿಕೊಂಡಿರುವುದು ವಿಶೇಷ.
ಇವರ ಈ ವಿಶೇಷ ಸಾಧನೆಗಾಗಿ ಭಾರತದ ಗೌರವಾನ್ವಿತ ಹಣಕಾಸು ಸಚಿವರಿಂದ ವೈಯಕ್ತಿಕ ಪರ್ಸೂಟ್ಸ್’ನಲ್ಲಿ ಪ್ರತಿಷ್ಠಿತ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್ ಪಡೆದಿದ್ದಾರೆ.
Also Read>> ಭದ್ರಾವತಿ | ಸುರಕ್ಷಿತವಲ್ಲದ ಸಾವಿರಾರು ಹೆಲ್ಮೆಟ್ ಪೊಲೀಸರಿಂದ ನಾಶ
ವೃತ್ತಿಯಾದ ಇನ್ಕಂ ಟ್ಯಾಕ್ಸ್ ಕ್ಷೇತ್ರದಲ್ಲೂ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಶ್ರೀ ಅನಿಲ್ ಕುಂಬ್ಳೆ ಉಪಸ್ಥಿತಿಯಲ್ಲಿ, ಕೇಂದ್ರ ಮತ್ತು ರಾಜ್ಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ ಅಸಾಧಾರಣ ಗುಪ್ತಚರ ಕಾರ್ಯಗಳಿಗಾಗಿ ಕೇಂದ್ರ ಆದಾಯ ತೆರಿಗೆ ಮಹಾನಿರ್ದೇಶಕರಿಂದ ಪ್ರಶಂಸಾ ಪತ್ರ ಹಾಗೂ ಅನ್ವೇಷಣಾ ಪ್ರಶಸ್ತಿ-2019 ಪಡೆದಿದ್ದಾರೆ.
ಸಂಗೀತದಲ್ಲಿ ಶ್ರದ್ಧೆಯ ಮಹತ್ವವನ್ನು ಬಿಂಬಿಸಿರುವ, ಕರ್ನಾಟಕ ಸಂಗೀತದ ಕೀರ್ತಿಯನ್ನು ಹೆಚ್ಚಿಸಿರುವ ಇವರ ಸಾಧನೆ ಹೀಗೇ ಮುಂದುವರಿಯಲಿ, ಕರ್ನಾಟಕ ಸಂಗೀತದ ವಿನೂತನ ಸಾಧಕರ ಈ ಒಂದು ಕಿರು ಪರಿಚಯದೊಂದಿಗೆ ದೇವರ ಅನುಗ್ರಹದಿಂದ ಇವರಿಗೆ ಇನ್ನೂ ಹೆಚ್ಚಿನ ಕೀರ್ತಿ ಲಭಿಸಲಿ ಎಂದು ಹಾರೈಸುತ್ತೇವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post