Saturday, September 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ಬನ್ನಿ ಕಾಯಿಲೆ ಹರಡೋಣ ಎನ್ನುವ ‘ಶಾಂತಿಪ್ರಿಯ’ರ ಬೆಂಬಲಿಸುವ ಮೂರ್ಖರಿಗೆ ದೇಶ ಸೇವಕನ ಮನವಿ ಎಲ್ಲಿ ಅರ್ಥವಾದೀತು

ಅರಿತೂ ಅಂಡಲೆಯುವ ಅಪಾರಮತಿಗಳ ರೋಗ ಅಪ್ಪಿ ಮುದ್ದಿಸುವುದು ಕಾಣ ಜಿನನಾಥ

April 1, 2020
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 4 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅವರೆಷ್ಟು ಕತ್ತಲೆ ಮಾಡುವರೋ
ನಾನಷ್ಟೇ ಬೆಳಕು ತರುತ್ತೇನೆ
ಅವರೆಷ್ಟು ಇರುಳುಗಳ ನೀಡುವರೋ
ನಾನಷ್ಟೇ ಸೂರ್ಯರನ್ನು ತರುತ್ತೇನೆ
ಈ ದುಷ್ಟ ಗಾಳಿ ತುಂಬಿಹ ಜಗದಲ್ಲಿ
ನಾ ಬೆಳಕನೆಂದಿಗೂ ಆರಗೊಡಲಾರೆ

ಮೋದಿ, ನರೇಂದ್ರ ದಾಮೋದರ ದಾಸ್ ಮೋದಿ… ಅವರನ್ನು ನೋಡಿ ಈ ಕವಿತೆ ಬರೆದರು ಅನ್ನಿಸುತ್ತದೆ. ಪ್ರತಿ ಬಾರಿಯೂ ದೇಶದಲ್ಲಿ ತೊಡಕುಂಟದಾಗ ಅಯ್ಯೋ ಮೋದಿ ಇದಾರಲ್ಲ ಬಿಡು ಅಂತ ಮನಸ್ಸು ತಾನೇ ಹೇಳುತ್ತದೆ. ಎಡವೋ, ಬಲವೋ ಅಥವಾ ನಡುವೋ.. 2014 ರಿಂದ ಈಚೆಗೆ ಭಾರತ ಸದೃಢವಾಗಿದೆ ಎನ್ನಿಸುವುದಿಲ್ಲವೆ ನಿಮಗೆ? ನೇರ ಪ್ರಶ್ನೆ. ಸಾಕ್ಷ್ಯಗಳನ್ನು ಒದಗಿಸುವಷ್ಟು ಇದು ನಿಜ. ಅಂತಹ ಯಾವ ಸಮಸ್ಯೆಯೂ ಇಲ್ಲವೇ ಇಲ್ಲ ಭಾರತ ಇಂದು ತನ್ನ ಕೈಯಲ್ಲಿ ಆಗುವುದಿಲ್ಲ ಎನ್ನುವುದು. 2ಎ, ಕಾಮನ್‌ವೆಲ್ತ್ ಕ್ರೀಡಾಕೂಟ, ಕಲ್ಲಿದ್ದಲು ಇಂತಹ ಒಂದು ಹಗರಣ ತೋರಿಸಿ. ಸಾಧ್ಯವೇ ಇಲ್ಲ. ವೀಸಾ ಕೊಡಲು ಅಸಾಧ್ಯ ಎಂದ ಅಮೆರಿಕಾದಿಂದ ಹಿಡಿದು ದಿನಕ್ಕೆ ಐದು ಬಾರಿ ನಮಾಜ್ ಮಾಡುವ ದೇಶಗಳಲ್ಲಿಯೂ ಮೋದಿ ಬೇಕು.

ಕೆಂಪು ಕೋಟೆಯ ಮೇಲಿಂದ ಶೌಚಾಲಯ ಕಟ್ಟಲು ಕರೆ ಕೊಟ್ಟಾಗ, ವಿದೇಶಿ ನಾಯಕರ ತಂದು ಭಾರತದ ಪರಂಪರೆಗಳ ತೋರಿದಾಗ, ಕಣ್ಣೀರಿಡುವ ಸಿವನ್ ಅವರನ್ನು ಅಪ್ಪಿಕೊಂಡಾಗ ಅಲ್ಲಿ ರಾಜಕೀಯ ನಾಯಕ ಕಾಣಲಿಲ್ಲ. ಕಂಡದ್ದು ಪ್ರಧಾನಿ ನರೇಂದ್ರ ಮೋದಿಯವರು. ಅವರೊಂದು ಧನಾತ್ಮಕ ಶಕ್ತಿ. ಪ್ರಸ್ತುತ ಇಡೀ ಜಗತ್ತೇ ಚೀನಾದ ವೈರಸ್ಸಿಗೆ ತತ್ತರಿಸಿದೆ. ಹೀಗಿರುವಾಗ ಶಕ್ತಿ ಅಷ್ಟೇ ಅಲ್ಲ, ಯುಕ್ತಿಯ ಬಳಕೆಯು ತುಂಬಾ ಅನಿವಾರ್ಯವಾಗಿದೆ. ನಾವು ಬರೀ ಔಷಧಗಳ ಕಡೆಗಷ್ಟೆ ಗಮನ ಕೊಟ್ಟು, ರೋಗವನ್ನು ಹರಡಲು ಬಿಟ್ಟರೆ ಕಷ್ಟ ಯಾರಿಗೆ? ಆಗ ಮೂರು ವಿಷಯಗಳನ್ನು ಕುರಿತು ಗಂಭೀರವಾಗಿ ಯೋಚಿಸಬೇಕಿತ್ತು.

1. ಚೀನೀ ವೈರಸ್ಸಿಗೆ ಮದ್ದು
2. ಅದು ಹೆಚ್ಚು ಹರಡದಂತೆ ತಡೆಯುವುದು
3. ರೋಗ ತಡೆಯಲು ಕೈಗೊಂಡ ಕ್ರಮಗಳಿಂದ ಜನರ ದೈನಂದಿನ ಬದುಕಿನಲ್ಲಿ ಆಗುವ ತೊಂದರೆ ತಪ್ಪಿಸುವುದು.
ವಿವರವಾಗಿ ಮುಂದೆ ನೋಡೋಣ. ಅದಕ್ಕೂ ಮೊದಲು ಪ್ರಯೋಗಾರ್ಥವಾಗಿ ಒಂದು ದಿನದ ಜನತಾ ಕರ್ಫ್ಯೂಗೆ ಪ್ರಧಾನಿ ಮೋದಿಯವರು ಕರೆ ಕೊಟ್ಟರು. ನಿಜವಾಗಿಯೂ ಅದೊಂದು ಯಶಸ್ವಿ ದಿನವಾಗಿತ್ತು. ಯಾಕೆಂದರೆ ಕೋರಿಕೊಂಡವರ ಕುರಿತು ಅಲ್ಲೊಂದು ಆಪ್ತತೆಯಿತ್ತು, ಪರಮ ನಂಬಿಕೆಯಿತ್ತು. ಇಡೀ ಭಾರತವೇ ಕರ್ಫ್ಯೂವನ್ನು ಇನ್ನಿಲ್ಲದಂತೆ ಆಚರಿಸಿತು. ಅಲ್ಲದೆ ಆ ಸಂಜೆ ವೈರಸ್ಸಿನ ವಿರುದ್ಧ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಪ್ರತಿ ವ್ಯಕ್ತಿಗೂ ಆತ್ಮೀಯತೆಯಿಂದ ಧನ್ಯವಾದಗಳ ತಿಳಿಸಲು ಸೂಚಿಸಿದರು. ಅದೂ ಯಶಸ್ವಿ. ಇಂತಹ ಪುಟ್ಟ ಪುಟ್ಟ ಕ್ರಮಗಳಿಂದ ದೇಶದಲ್ಲಿ ಪೂರಕ ಶಕ್ತಿ ಹೆಚ್ಚುವುದರಲ್ಲಿ ಅನುಮಾನ ಕಿಂಚಿತ್ತೂ ಇಲ್ಲ.

ದಿನಾಂಕವನ್ನು ಹೇಳಿ ಬಿಡುತ್ತೇನೆ ದಿನಾಂಕ 24 ಮಾರ್ಚ್ 2020 ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಮೈಕಲ್ ಜೆ ರಯಾನ್ ಹೇಳುತ್ತಾರೆ ಭಾರತವೇ ತಮ್ಮ ಕರೋನಾ ವಿರುದ್ಧದ ಹೋರಾಟದಲ್ಲಿ ನಾಯಕತ್ವ ವಹಿಸಬೇಕು. ನಾವು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಲು ಸಿದ್ಧ ಎಂದು. ಯಾಕೆ? ಅಮೆರಿಕಾ? ಫ್ರಾನ್ಸ್‌? ಚೀನಾ? ಜಪಾನ್? ಬ್ರಿಟನ್? ಇನ್ನೂ ಎಷ್ಟು ತಮ್ಮನ್ನು ತಾವು ಮುಂದುವರಿದ ದೇಶಗಳು ಎಂದು ಕರೆದುಕೊಳ್ಳುವ ಪಟ್ಟಿಯೇ ಇದೆ.

ಅಲ್ಲದೆ ವೈದ್ಯಕೀಯ ವ್ಯವಸ್ಥೆಯಲ್ಲಿ ಅವರು ನಮಗಿಂತ ಬಹಳ ಪ್ರಗತಿ ಹೊಂದಿದವರು ಎಂದು ಸಾರಿಕೊಂಡಿದ್ದಾರೆ. ಆದರೂ ಭಾರತವೇ ಬೇಕು. ಯಾಕೆಂದರೆ ಇದು ಹೊಸ ಭಾರತ. ವೈದ್ಯಕೀಯ ಕ್ಷೇತ್ರದ ಅದ್ವಿತೀಯ ಸಾಧಕ, ಕೇವಲ ಆರು ಚಿಲ್ಲರೆ ಕೋಟಿ ಜನಸಂಖ್ಯೆಯ ಇಟಲಿ ಚೀನೀ ವೈರಸ್ಸಿಗೆ ಸೋತು ಮಕಾಡೆ ಮಲಗಿದೆ. ಎಂಬತ್ತು ವರ್ಷಗಳ ವಯಸ್ಸಿನ ಮೇಲ್ಪಟ್ಟ ವೃದ್ಧರಿಗೆ ಹೆಚ್ಚಿನ ಚಿಕಿತ್ಸೆ ನಿರಾಕರಿಸಲಾಗಿದೆ. ಪ್ರಧಾನಿ ಕೈ ಸೋತು, ಕಣ್ಣೀರಿಟ್ಟು ಹಲವು ದಿನಗಳೇ ಕಳೆದಿವೆ. ಆದರೆ ಭಾರತದಲ್ಲಿ? ಒಂದು ನೂರಾ ನಲವತ್ತು ಕೋಟಿ ಜನಸಂಖ್ಯೆ, ವಿಶಿಷ್ಟ ಆಚರಣೆಗಳು, ವಿಭಿನ್ನ ಧರ್ಮಗಳು, ವಿಸ್ತಾರವಾದ ಭೂಭಾಗ ಹೀಗಿದ್ದರೂ ಚೀನೀ ವೈರಸ್ಸಿಗೆ ಸಾವಿರ ದಾಟಲು ತಿಣುಕಾಡಿತು. ಮತ್ತೆ ಸೋಲುವುದು ಖಚಿತ. ಭಾರತದಲ್ಲಿ ಬರೀ ತನ್ನ ಜನರನ್ನು ಅಷ್ಟೇ ಕಾಪಾಡುತ್ತಿಲ್ಲ, ವಿಶ್ವದ ನಾನಾ ಭಾಗಗಳಲ್ಲಿ ಸಿಲುಕಿದ ಭಾರತೀಯರನ್ನು ಕರೆ ತಂದು ರಕ್ಷಿಸಲಾಯಿತು. ಇದು ಭಾರತ.

ಫೆಬ್ರವರಿ ತಿಂಗಳ ಹದಿನೈದರಂದು ಮೂವರು ಸೋಂಕಿತರಿದ್ದರು, ಮಾರ್ಚ್ ಎರಡರಂದು ಐದು, ಮಾರ್ಚ್ 24 ರಂದು 562 ಜನರು ಸೋಂಕಿತರಾಗಿದ್ದರು. ಮಾರ್ಚ್ 28ಕ್ಕೆ 933 ಜನ ಚೀನೀ ವೈರಸ್ಸಿನ ಪೀಡಿತರು. ಭಾರತ ಸರ್ಕಾರ ಏನು ಮಾಡಿದೆ ಎನ್ನುವುದು ಇಲ್ಲೇ ಇದೆ. ನಿಮಗೆ ಅಂಕಿಅಂಶಗಳು ವಿಸ್ತೃತವಾಗಿ ತಿಳಿಸಿವೆ.

ಪ್ರಶ್ನೆ ಕೇಳಿಯೇ ಕೇಳುತ್ತಿದ್ದಾರೆ ಲಾಕ್ ಡೌನ್ ಪರಿಣಾಮ ಏನಾಗಿದೆ? ನಾವು ಸಾವಿರ ತಲುಪಿ ಆಯ್ತು, ನಾವು ಮೂರ್ಖನ ಕೈಗೆ ದೇಶ ಕೊಟ್ಟೆವು, ಜನ ಹಸಿವಿನಿಂದ ಅಸುನೀಗುತ್ತಿದ್ದಾರೆ, ಅವರ ಬಾಯಿಬಡುಕತನ ನಿಲ್ಲುತ್ತಲೇ ಇಲ್ಲ. ಅಲ್ಲ ಪ್ರಧಾನಿಗಳ ಕೈಲಿ ಮಂತ್ರದಂಡವೇನು ಇದೆಯೇ? ಅಥವಾ ಯಾವ ದೇಶದಲ್ಲಿ ಥಟ್ ಅಂತ ರೋಗವೇ ಎದ್ದು ಓಡಿದ ಉದಾಹರಣೆ ಇದ್ದರೆ ತೋರಿಸಿ. ಒಂದು ಕನ್ನಡ ನ್ಯೂಸ್ ಚಾನೆಲ್ ಇದೆ, ಪ್ರತಿ ಮುಖ್ಯಾಂಶಗಳನ್ನು ತೋರಿಸುವಾಗಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಲಾಕ್ ಡೌನ್ ಕರೆಯನ್ನು ತೋರಿಸಿ, ಬೆನ್ನಿಗೆ ಅದರಿಂದ ಆದ ಕ್ಷಣಿಕ ಅಡಚಣೆಗಳ ತೋರಿಸಿ ಜನರಲ್ಲಿ ಅಪನಂಬಿಕೆ ಮೂಡಿಸುತ್ತಿದೆ.

ಜನರು ಹಸಿವಿನಿಂದ ಸಾಯುವ ಹತ್ತು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ರೋಗದಿಂದ ಸಾಯುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಲಾಕ್ ಡೌನ್ ಆಗಿರಲೇಬೇಕು. ಸಮಾಜಕ್ಕೆ ಒಂದು ವಿಷಯವನ್ನು ಕುರಿತು ಹೇಳುವ ಮುನ್ನ ಅದರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಸರಳವಾಗಿ ಹೇಳುವುದಾದರೆ ಚೀನೀ ವೈರಸ್ಸಿನ ವಿರುದ್ಧದ ಮಹಾಸಮರದಲ್ಲಿ ಭಾರತದ ಜನಸಂಖ್ಯೆಗೆ ಹೋಲಿಸಿದರೆ ಪೀಡಿತರು ಕನಿಷ್ಠ ಹತ್ತು ಕೋಟಿ ಜನರು ಆಗುವ ಸಾಧ್ಯತೆಯಿದ್ದು (ಅಮೆರಿಕಾ ಸಂಸ್ಥೆಯ ವರದಿ) ಲಾಕ್ ಡೌನ್ ಅಂತಹ ಕಠಿಣ ಕ್ರಮಗಳ ತರಲೇಬೇಕಿದೆ. ಅಲ್ಲದೆ ಇದರಿಂದಾಗಿ ಕೆಲ ದಿನಗಳ ತನಕ ಆಹಾರ ಇನ್ನಿತರ ಸಮಸ್ಯೆಗಳು ಎದುರಾದರೂ ಅನುಸರಿಸಿ ನಡೆಯಬೇಕಿದೆ. ಲಾಕ್ ಡೌನ್‌ನ ಮೊದಲ ವಾರದಲ್ಲಿ ದೊರಕಿದ ಸೋಂಕಿತರು ಕಳೆದ ಎರಡು ವಾರಗಳಲ್ಲಿ ರೋಗಕ್ಕೆ ತುತ್ತಾಗಿರುವ ಸಾಧ್ಯತೆ ಇದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಈ ರೋಗವು ಮತ್ತೊಬ್ಬರಿಗೆ ಹರಡಲು ಕನಿಷ್ಠ ಹದಿನೈದು ದಿನಗಳ ತೆಗೆದುಕೊಳ್ಳುತ್ತದೆ. ಜನ ಸ್ವಬಂಧಿತರಾಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಇನ್ನು ಲಾಕ್ ಡೌನ್ ವಿಚಾರ. ಭಾರತ ಮೊದಲ ದೇಶವೂ ಅಲ್ಲ, ಕೊನೆಯ ದೇಶವೂ ಅಲ್ಲ. ರಷ್ಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಕೊಲಂಬಿಯಾ, ಸೌದಿ ಅರೇಬಿಯಾ, ಯುಕೆ, ಆಸ್ಟ್ರೇಲಿಯ, ಜೋರ್ಡಾನ್, ಅರ್ಜೆಂಟೀನಾ, ಇಸ್ರೇಲ್, ಬೆಲ್ಜಿಯಂ, ಜರ್ಮನಿ, ಮಲೇಷ್ಯಾ, ಫ್ರಾನ್ಸ್‌ ಇಟಲಿ, ಸ್ಪೇನ್, ಪೋಲೆಂಡ್ ಹೀಗೆ ಉದ್ದನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ದೇಶಗಳಲ್ಲಿ ಲಾಕ್ ಡೌನ್ ಇದೆ. ನಮಗಿಂತ ಕಠಿಣವಾಗಿ ಜಾರಿಗೆ ತರಲಾಗಿದೆ. ಮೀರಿದ ಪಕ್ಷದಲ್ಲಿ ಜೈಲು ಶಿಕ್ಷೆಯಂಥ ಕಠಿಣ ಕ್ರಮಗಳನ್ನು ನೀಡಲಾಗಿದೆ.

ಅವರು ನಮ್ಮ ಪ್ರಧಾನಿ. ಕೈ ಕಟ್ಟಿ ಮೌನವಾಗಿ ಕೂರಲಿಲ್ಲ, ಕಣ್ಣೀರಿಟ್ಟು ಆಗಸ ನೋಡಲಿಲ್ಲ, ಗುಂಡಿಟ್ಟು ಸುಡಲೂ ಇಲ್ಲ, ಅನಿವಾಸಿಗಳ ಮರೆಯಲಿಲ್ಲ, ಸೇನೆ ಕಳಿಸಿ ಬಂಧಿಸಲಿಲ್ಲ, ಏನನ್ನೂ ನೋಯಿಸಲಿಲ್ಲ. ಬದಲಿಗೆ ಬಂದರು ನೆಚ್ಚಿನ ದೇಶವಾಸಿಗಳಿಗೆ ಅಪಾರ ನಂಬಿಕೆಯಿಂದ ನನಗೆ ಕೇವಲ ನಿಮ್ಮ ಇಪ್ಪತ್ತೊಂದು ದಿನಗಳ ಕೊಡಿ. ದಯಮಾಡಿ ಮನೆಯಲ್ಲಿರಿ. ಹದಿನೆಂಟು ದಿನಗಳಲ್ಲಿ ಮಹಾಭಾರತವನ್ನು ಗೆದ್ದಿದ್ದರು, ಈ ಇಪ್ಪತ್ತೊಂದು ದಿನಗಳಲ್ಲಿ ಕರೋನಾ ಗೆಲ್ಲೋಣ. ಪುಟ್ಟ ಕಂದನಿಗೆ ತಂದೆ ರಮಿಸಿ ಹೇಳುವಂತೆ ಚಂದದ ಚಿತ್ರ ಹಿಡಿದು ಯಾರು ರಸ್ತೆಗೆ ಬರಬೇಡಿ (ಓಟಜಿ ್ಕಟ ್ಟ ಘೆ ಘೆಜ್ಝಿಛಿ) ಎಂದರು. ಅಷ್ಟಕ್ಕೇ ಸುಮ್ಮನಿರದೆ ಸಂಸದರ ಕರೆಯಿಸಿ ಲಾಕ್ ಡೌನ್ ಪರಿಣಾಮಗಳನ್ನು ನೋಡಿ, ಸಾಲು ಸಾಲು ಸಭೆಗಳ ಕರೆದರು. ಎರಡೇ ದಿನಗಳಲ್ಲಿ ಪರಿಹಾರದೊಂದಿಗೆ ಬಂದರು. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ 1.70 ಲಕ್ಷ ಕೋಟಿ ರೂಪಾಯಿಗಳ ಅನುದಾನ ಹಾಕಿ ಅನುಷ್ಠಾನಕ್ಕೆ ತಂದರು.

  • ಕರೋನಾ ವಿರುದ್ಧದ ಹೋರಾಟದ ಪ್ರತಿ ಆರೋಗ್ಯ ಕಾರ್ಯಕರ್ತರಿಗೂ ಐವತ್ತು ಲಕ್ಷ ರೂಪಾಯಿ ವಿಮೆ
  • ಕಿಸಾನ್ ಸಮ್ಮಾನ್ ನಿಧಿ ಮುಂದಿನ ಕಂತು ಮುಂಚಿತವಾಗಿ ಬಿಡುಗಡೆ
  • ಪ್ರಸ್ತುತ ನೀಡಲಾಗುವ ಐದು ಕೆಜಿ ಅಕ್ಕಿ ಅಥವಾ ಗೋಧಿಯ ಪಡಿತರದೊಂದಿಗೆ ಇನ್ನೂ ಐದು ಕೆಜಿ ಅಕ್ಕಿ ಅಥವಾ ಗೋಧಿ ನೀಡುವುದು. ಜೊತೆಗೆ ಒಂದು ಕೆಜಿ ದ್ವಿದಳ ಧಾನ್ಯ ನೀಡುವುದು.
  • ಪ್ರತಿ ತಿಂಗಳು ಜನಧನ್ ಖಾತೆ ಇರುವ ಮಹಿಳೆಯರಿಗೆ ಐದು ನೂರು ರೂಪಾಯಿ ಹಾಕುವುದು. (ಕಾಗಜ್ ಚಾಹಿಯೇ ತೊ ದಿಖಾಯೇಂಗೆ)
  • ಎಂಟು ಕೋಟಿಯಷ್ಟು ಇರುವ ಬಡ ಜನರಿಗೆ ಉಚಿತ ಸಿಲೆಂಡರ್ ವ್ಯವಸ್ಥೆ ಮಾಡಲಾಗಿದೆ.
  • ಹಿರಿಯ ನಾಗರಿಕರು, ವಿಧವಾ ಮತ್ತು ದಿವ್ಯಾಂಗರಿಗೆ 1000 ರೂಪಾಯಿಗಳ ಮಾಸಿಕ ಪಿಂಚಣಿ.
  • ಮುಂದಿನ ಮೂರು ತಿಂಗಳ ಸಾಲದ ಕಂತುಗಳನ್ನು ಮುಂದೂಡಿರುವುದು.

ನಿಮಗೆ ಗೊತ್ತಿಲ್ಲ ಈ ಕ್ರಮದಿಂದ ಭಾರತದ ಎಂಬತ್ತು ಕೋಟಿ ಜನರು ಅನುಕೂಲ ಪಡೆಯಲಿದ್ದಾರೆ. ಹಲವು ದೇಶಗಳ ಕ್ರಮಗಳನ್ನು ಅಧ್ಯಯನ ಮಾಡಿ ನಮ್ಮ ದೇಶದಲ್ಲಿ ಜಾರಿಗೆ ತರಲಾಯಿತು ಮತ್ತು ರಾಜ್ಯ ವಿಪತ್ತು ನಿಧಿಯಿಂದ ಈ ಖರ್ಚುಗಳನ್ನು ಭರಿಸಲಾಗುತ್ತದೆ. ಅಲ್ಲದೆ ಇಅ್ಕಉಖ ಊಖಿಘೆಈ ಎಂಬ ನಿಧಿ ಸ್ಥಾಪಿಸಿ ಅದರ ಮೂಲಕ ಆಸಕ್ತ ದಾನಿಗಳಿಂದ ಹಣ ಸಂಗ್ರಹ ಮಾಡಲಾಗುತ್ತಿದೆ.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಂದ ಪ್ರಧಾನಿ ಮೋದಿಯವರು ಸಮಸ್ತ ಭಾರತೀಯರ ಕ್ಷಮೆ ಕೇಳಿದರು. ಅಡಚಣೆಗಳಿಗೆ ಕ್ಷಮಿಸಿ ಎಂದರು. ಅಂಕಿ ಅಂಶಗಳು ನಮ್ಮ ಕಣ್ಣ ಮುಂದೆಯೇ ಇದೆ. ಚೀನಾದ ಈ ಕಾಯಿಲೆ ಇನ್ನಿಲ್ಲದಂತೆ ಸಾಯುವುದು ಖಂಡಿತ. ಇಲ್ಲಿ ಬೇಕಾಗಿರುವುದು ದೇಶವಾಸಿಗಳ ಸಹಭಾಗಿತ್ವವೇ ಹೊರತು ಅಸಡ್ಡೆಯಲ್ಲ. ಅವರು ತಮ್ಮ ಕೆಲಸ ಮಾಡಿ ಆಗಿದೆ. ನಾನು ಧರಣಿ ಮಾಡುತ್ತೇನೆ ಎನ್ನುವ ’ರಾಜ’ರ, ಬನ್ನಿ ಕಾಯಿಲೆ ಹರಡೋಣ ಎನ್ನುವ ’ಶಾಂತಿಪ್ರಿಯ’ನ, ಕಾಯಿಲೆ ಬಂದರೂ ಕದ್ದು ತಿರುಗುವ ’ಮೂರ್ಖ’ರ, ಸರ್ಕಾರದ ಕ್ರಮಗಳ ಒಳ ಬಾಗಿಲಲ್ಲೇ ನಿಂತು ಹೀಗಳೆಯುವ ಅಕ್ಷರಸ್ಥ ದಡ್ಡರಿಗೆ ಕಿರಿಗಣ್ಣಿನಿಂದಲೂ ನೋಡದೇ ಭಾರತ ಮತ್ತೆ ಬರಲಿದೆ. ನಾವೆಲ್ಲರೂ ಗೆಲ್ಲೋಣ, ಚೀನೀ ವೈರಸ್ ಸೋಲಿಸೋಣ. ಸನಾತನ ಪರಂಪರೆಯಲ್ಲಿ ಇಪ್ಪತ್ತೊಂದು ದಿನಗಳಿಗೆ ವಿಶಿಷ್ಟ ಮಹತ್ವ ಇದೆ. ಅಲ್ಲದೆ ಏಪ್ರಿಲ್ ಹದಿನಾಲ್ಕು ಬಾಬಾ ಸಾಹೇಬರ ಜನುಮ ಜಯಂತಿ. ಭಾರತ ಗೆಲ್ಲಲಿದೆ. ಜೈ ಹಿಂದ್.
ಅರಿತವರು ಮನೆಯೊಳಗೆ ಇಹುವರಯ್ಯ
ಅರಿಯದವರೂ ಅರಿತು ನಡೆಯುತಿಹಯ್ಯ
ಅರಿತೂ ಅಂಡಲೆಯುವ ಅಪಾರಮತಿಗಳ ರೋಗ ಅಪ್ಪಿ ಮುದ್ದಿಸುವುದು ಕಾಣ ಜಿನನಾಥ…


Get in Touch With Us info@kalpa.news Whatsapp: 9481252093

Tags: India Lock DownJanata CurfewKannadaNewsWebsiteLatestNewsKannadaPM Narendra ModiSachin Parshwanathಕೊರೋನಾ ವೈರಸ್ಜನತಾ ಕರ್ಫ್ಯೂಪ್ರಧಾನಿ ನರೇಂದ್ರ ಮೋದಿಭಾರತ ಲಾಕ್ ಡೌನ್ಸಚಿನ್ ಪಾರ್ಶ್ವನಾಥ್
Previous Post

ಪ್ರಪಂಚಾದ್ಯಂತ ಕೋವಿಡ್19 ಅಟ್ಟಹಾಸ: ಒಂದೇ ವಾರದಲ್ಲಿ 8 ಲಕ್ಷಕ್ಕೇರಿದ ಪೀಡಿತರ ಸಂಖ್ಯೆ, 865 ಮಂದಿ ಒಂದೇ ದಿನ ಬಲಿ

Next Post

ಲಾಕ್’ಡೌನ್ ವೇಳೆ ಊಟ ವಿತರಿಸುವ ಸಂಸ್ಥೆಗಳ ವಿರುದ್ದ ಕೇಸ್ ದಾಖಲು: ಶಿವಮೊಗ್ಗ ಪಾಲಿಕೆ ಆಯುಕ್ತ ಎಚ್ಚರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಲಾಕ್'ಡೌನ್ ವೇಳೆ ಊಟ ವಿತರಿಸುವ ಸಂಸ್ಥೆಗಳ ವಿರುದ್ದ ಕೇಸ್ ದಾಖಲು: ಶಿವಮೊಗ್ಗ ಪಾಲಿಕೆ ಆಯುಕ್ತ ಎಚ್ಚರಿಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025

ಸುಬ್ರೋಟೋ ಕಪ್ U-15: CISCE, ಪಶ್ಚಿಮ ಬಂಗಾಳಕ್ಕೆ ಭರ್ಜರಿ ಜಯ

September 6, 2025

Inspire Institute of Sport launches ‘IIS Sikhaega’

September 6, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025

ಸುಬ್ರೋಟೋ ಕಪ್ U-15: CISCE, ಪಶ್ಚಿಮ ಬಂಗಾಳಕ್ಕೆ ಭರ್ಜರಿ ಜಯ

September 6, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!