Yes they know the tricks
ಈವರೆಗೆ ಆಡಳಿತ ನಡೆಸಿದ ಕಾಂಗ್ರೆಸಿಗೆ ಹೇಗೆ ಮತ ಪಡೆಯಬೇಕು ಎಂಬ ಉಪಾಯ ತಿಳಿದಿದೆ. ನಾನು ಬಿಜೆಪಿ ಪರ ಬಹಳ ಹಿಂದೆ ಕೆಲಸ ಮಾಡಿದವನಾಗಿ ನನ್ನ ಅನುಭವ ಹಂಚಿಕೊಳ್ಳುತ್ತಿದ್ದೇನೆ. ಸ್ವತಃ ಕಣ್ಣೆದುರಿಗೇ ನಡೆದ ವಿಚಾರ. ಅಮಿಷಗಳಿಗೆ, ಹಣ ಹೆಂಡಗಳಿಗೆ ಮೀಸಲಿಟ್ಟ ಮತದಾರರದ್ದೊಂದು ವರ್ಗವೇ ಇದೆ. ಅವರಿಗೆ ದೇಶ ಭಕ್ತಿ, ದೇಶ ಪ್ರೇಮ ಎಂಬುದೇ ಇಲ್ಲ. ಏನೋ ರಾಮನ ಕಥೆ ಹೇಳಿ, ಅಯೋಧ್ಯೆಯ ಮಂದಿರ ವಿಚಾರ ಹೇಳಿ ಅವರ ಮನ ಪರಿವರ್ತನೆ ಮಾಡಿದ್ದವು. ನಂತರ ನಮ್ಮೊಳಗೇ ಕೃತಾರ್ಥರಾಗುತ್ತಿದ್ದೆವು.
ಈ ಸಲ ಬಿಜೆಪಿ ಖಂಡಿತ ಎಂದು ಓಟರ್ ಲಿಸ್ಟಿನಲ್ಲಿ ರೈಟ್ ಹಾಕಿ, ಈ ಸಲ ಶೇ.75 ಗ್ಯಾರಂಟಿ ಎಂದು ರಿಪೋರ್ಟ್ ಮಾಡುತ್ತಿದ್ದೆವು. ಕಾಂಗ್ರೆಸಿಗರು ಮನದೊಳಗೆ ನಗುತ್ತಿದ್ದರು. ನೋಡ್ತಾ ಇರಿ ಚುನಾವಣೆಯ ನಂತರ ಮತ ಎಣಿಕೆಯಲ್ಲಿ ಎಂದು ನಗುತ್ತಿದ್ದರು. ನಾವು ತಾತ್ವಿಕವಾಗಿ ಹೇಳಿ ಅವರ ಮನಸ್ಸನ್ನು ನಮ್ಮೆಡೆಗೆ ತಂದುಕೊಂಡೆವು. ಸರೀ, ಚುನಾವಣಾ ಬೂತ್’ನಲ್ಲಿ ನಾವು ಕುಳಿತಿರುವಾಗ ಮತದಾರರು ನಮ್ಮ ಮುಖ ನೋಡದೆ ಹೋಗುತ್ತಿದ್ದಾಗ ಸ್ವಲ್ಪ ಭಯ ಶುರುವಾಯ್ತು. ಮತ್ತೆ ನಾವೇ ಹೋಗಿ ಕೇಳಿದರೆ, ಇಲ್ಲ ಅಲ್ಲಿ ಕಾಂಗ್ರೆಸ್ಸಿಗರ ಇದಿರು ನಿಮ್ಮ ಪರ ನಾವು ಎಂದು ತೋರಿಸಿದರೆ ನಮಗೆ ತೊಂದರೆ ಆಗುತ್ತೆ. ನಾವು ನಿಮ್ಮ ಪರವೇ ಇದ್ದೇವೆ. ಓಟು ಬಿಜೆಪಿಗೇ ಒತ್ತಿದ್ದು. ಆದರೆ ಈ ಗುಟ್ಟು ಅವರಿಗೆ ತಿಳಿದರೆ ಮತ್ತೆ ನಮಗೆ ರಗಳೆ ಆಗುತ್ತದೆ. ನಿಮಗಾದರೆ understanding ಇದೆ. ಅವರಿಗಿಲ್ಲ ಎಂದು ಅಲ್ಲಿಂದ ಜಾರುತ್ತಿದ್ದರು.
ಆಯ್ತಪ್ಪಾ, ನಿಷ್ಟುರ ಬೇಡ. ನೀವು ನಮ್ಮವರೇ ಅಲ್ವೇ ಅಂತ ಮತ್ತೊಮ್ಮೆ ಓಟರ್ ಲಿಸ್ಟ್’ನಲ್ಲಿ ಗುಣಿಸು ಹಾಕಿದ್ದನ್ನು ರೈಟ್ ಮಾಡ್ತಿದ್ದೆವು. ಮತ ಎಣಿಕೆ ದಿನ ಸಂಜೆ ನೋಡಿದರೆ ಕಾಂಗ್ರೆಸಿಗೇ ಗೆಲುವು. ಇದರ ಗುಟ್ಟೇನು ಎಂದು ನೋಡಿದಾಗ, ಹಿಂದಿನ ದಿನ ಒಂದೆರಡು ಗುಂಪುಗಳು ಹಣ, ಹೆಂಡ, ದಿನಸಿ, ಬಟ್ಟೆಬರೆಗಳನ್ನು ಹಣಕ್ಕಾಗಿ ಮತ ಮಾರುವವರ ಮತದಾರರ ಬಳಿಗೆ supply ಮಾಡುತ್ತಿದ್ದರು. ಯಾರೋ ನಮ್ಮ ಹುಡುಗರೂ ಇದರ ಲಾಭ ಪಡೆಯುತ್ತಾರೆ.
ಅವರ ಓಟ್ ಮಾತ್ರವೇ ಬಿಜೆಪಿಗೆ. ಅಂದರೆ ಒಟ್ಟು ಹತ್ತೋ ಹದಿನೈದು ಶೇಕಡವಷ್ಟೆ. ಆ ಮೇಲೆ ಐದು ವರ್ಷದ ನಂತರವೇ ಕಾಂಗ್ರೆಸಿನ ಭೇಟಿ. ನಮ್ಮದು ಹಾಗಲ್ಲ. ಗುರು ಪೂರ್ಣಿಮೆ, ರಕ್ಷಾ ಬಂಧನ ಇತ್ಯಾದಿ ಕಾರ್ಯಕ್ರಮಗಳು ಸತತ ನಡೆಯುತ್ತಿತ್ತು. ಅದಕ್ಕೂ ಆ ಮತದಾರರು ಬರುತ್ತಿದ್ದರು ಮತ್ತು ಅಲ್ಲಿನ ಬೈಟಕ್ ವಿಚಾರ ಕಾಂಗ್ರೆಸಿಗರಿಗೆ ತಿಳಿಸುತ್ತಿದ್ದರು. ಮಾಡಿ, ಮಾಡಿ, ನಮಗೆ ಗೊತ್ತು ಹೇಗೆ ಮತ ಎಳೆಯಬೇಕೆಂದು ಎಂದು ಕಾಂಗ್ರೆಸ್ ನಗ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಮತದಾರರು ವಿದ್ಯಾವಂತರೂ ಆಗಿ ಇಂತಹ ಅಮಿಷಗಳಿಗೆ ಬಲಿಯಾಗದೆ ಬಿಜೆಪಿಗೆ ಅಭಿವೃದ್ಧಿಯ ನಿರೀಕ್ಷೆಯಲ್ಲಿ ಮತ ಚಲಾಯಿಸಿ ಬಿಜೆಪಿಯನ್ನು ಬಲಿಷ್ಟ ಮಾಡುತ್ತಾ ಬಂದರು. ಕಾಂಗ್ರೆಸಿಗರ Plan flap ಆಗುತ್ತಾ ಬಂತು.
ನಂತರ ಅಭಿವೃದ್ಧಿಯೂ ಆಯ್ತು. ಆದರೆ ಪಕ್ಷದೊಳಗೆ ಭಿನ್ನಾಭಿಪ್ರಾಯ, ಅಧಿಕಾರ ಲಾಲಸೆಯೂ ಶುರುವಾಯ್ತು. ಯಾರೋ ಮೋದಿ ಹೆಸರಿಗಾಗಿ ಮತ ನೀಡಿದರಷ್ಟೇ ಹೊರತು ಸ್ಥಳೀಯ ಅಭ್ಯರ್ಥಿಗಳ ಮುಖ ನೋಡಲಿಲ್ಲ. ಅಂದು ಇದೇ ರೀತಿ ಅಟಲ್ ಜೀ ಮುಖ ನೋಡಿ ಬಿಜೆಪಿಗೆ ಮತ ನೀಡಿದರು. ಅಭಿವೃದ್ಧಿ ಶೂನ್ಯವಾಗುತ್ತಾ ಬಂತು. ಬಜೆಟ್ ಬಂತು, ಕ್ರಿಯಾತ್ಮಕ ಸ್ಪಂದನೆ ನಿಂತು ಹೋಯ್ತು, ಬರವಾಗಲೀ, ನೆರೆಯಾಗಲೀ ಬಂದರೆ ಪರಿಹಾರ ಶೂನ್ಯವೇ ಆಯ್ತು. ರೈತರು ಸಾಲಮಾಡಿ ಸೋತು ಹೋದರೆ ಕೇಳುವವರಿಲ್ಲ, ಆತ್ಮಹತ್ಯೆ ಮಾಡಿಕೊಂಡರೆ ಆ ಹೆಣದ ಮೆರವಣಿಗೆಗಷ್ಟೇ ಸೀಮಿತವಾಯ್ತು ಸ್ಪಂದನೆ. ಸಾಲ ಮನ್ನಾ ಮಾಡುವ ಆಶ್ವಾಸನೆ ನೀಡಿ ಮತ ಯಾಚನೆ ಮಾಡಿ ರೈತರ ಮತಗಳ encashment ನಡೆಯಿತೇ ವಿನಾ ಸಾಲ ಮನ್ನಾ ಆಗಲಿಲ್ಲ. ಈಗೀಗ ಭಾಜಪದ ಬಳಿ ಅಸ್ತ್ರಗಳಿಲ್ಲದಾಯ್ತು. ರಾಮಮಂದಿರ ಎಂದು ಹೇಳಿ ಒಮ್ಮೆ, ಸಾಲಮನ್ನಾ ಎಂದು ಹೇಳಿ ಇನ್ನೊಮ್ಮೆ, ಅಂತೂ ಅಸ್ತ್ರಗಳು ಮುಗಿಯಿತು. ಹಾಗಾಗಿ ಈಗ ಮತ್ತೆ ಹಿನ್ನಡೆಯಾಗುತ್ತಿದೆ.
ಆ ಕಡೆ ಕಾಂಗ್ರೆಸಿಗರೂ ಇಲ್ಲ, ಈ ಕಡೆ ಬಿಜೆಪಿಗರೂ ಇಲ್ಲ. ಎಲ್ಲಾ ಅವರವರು ಮಾಡಿದ ಸಂಪತ್ತಿನ ರಕ್ಷಣೆಯಲ್ಲೇ ಮಗ್ನರಾಗಿದ್ದಾರೆಯೇ ಹೊರತು ಪ್ರ್ದಸ್ಪಂದನ ಇಲ್ಲದಂತಾಗಿದೆ. ಇನ್ನು ಮೋದಿಯ ಹೆಸರೂ ಕೆಲಸ ಮಾಡದು, ರಾಮನ ಹೆಸರೂ ಕೆಲಸ ಮಾಡದು. ಕೊನೆಗೊಮ್ಮೆ ದಕ್ಕಿದ ಸ್ವಾತಂತ್ರ್ಯವೂ ರೆಟ್ಟೆ ಬಲದವರ ಪಾಲಾಗಬಹುದು ಅನ್ನಿಸ್ತದೆ. ಆದರೂ ಮೋದಿಯವರು ಸಂಸದರಿಗೆ, ‘ಮುಂದೆ ನನ್ನ ಹೆಸರು ಹೇಳಿ ಮತಯಾಚನೆ ಮಾಡಬೇಡಿ’ ಎಂಬ ಮಾರ್ಮಿಕ ಮಾತು ಹೇಳಿದರು. ನಿಮ್ಮ ನಿಮ್ಮ ಕೆಲಸಗಳ ಆಧಾರದಲ್ಲೇ ಮತ ಯಾಚಿಸಿ ಎಂದು ಹೇಳಿದ್ದಾರೆ. ಎಲ್ಲಿ ಸಾರ್ವಜನಿಕರ ಕೆಲಸಕ್ಕೆ ಪುರುಸೋತ್ತು ಇದೆ ಹೇಳಿ. ಅವರವರ ಆಸ್ತಿ ಪಾಸ್ತಿ, ಹಣ, ಮಾನ ಮರ್ಯಾದೆ ಕಾಪಾಡಿಕೊಳ್ಳುವ ಭರದಲ್ಲಿ ಮತ್ತೆ ಚುನಾವಣೆಯ ದಿನ ಬಂದು ಬಿಡುತ್ತದೆ.
Discussion about this post