ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #PMNarendraModi ಪತ್ರಿಕಾಗೋಷ್ಠಿ ನಡೆಸುವುದಿಲ್ಲ, ಮಾಧ್ಯಮಗಳನ್ನು ಎದುರಿಸಲು ಹೆದರುತ್ತಾರೆ ಎಂದೆಲ್ಲಾ ಕಳೆದ 10 ವರ್ಷಗಳಿಂದ ಪ್ರತಿಪಕ್ಷಗಳು ಮಾಡುತ್ತಿರುವ ಟೀಕಾ ಪ್ರಹಾರಕ್ಕೆ ಈಗ ಸ್ವತಃ ಪ್ರಧಾನಿಯವರೇ ಉತ್ತರ ನೀಡಿದ್ದು, ಈ ಮೂಲಕ ಮಿಲಿಯನ್ ಡಾಲರ್ ಪ್ರಶ್ನೆಗೆ ಸಮಾಧಾನ ಕೊಟ್ಟಿದ್ದಾರೆ.
ಆಜ್ ತಕ್ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು, ಪತ್ರಿಕಾಗೋಷ್ಠಿ #PressConferences ನಡೆಸುವುದರಿಂದ ದೂರ ಉಳಿದಿರುವ ತಮ್ಮ ನಿರ್ಧಾರಕ್ಕೆ ವಿವರಣೆ ನೀಡಿದ್ದಾರೆ.

ತಾವು ಗುಜರಾತ್ #Gujrat ಮುಖ್ಯಮಂತ್ರಿಯಾಗಿದ್ದಾಗ ಹೋಲಿಸಿದರೆ ಈಗ ಕಡಿಮೆ ಸಂದರ್ಶನಗಳನ್ನು ನೀಡುತ್ತಾರೆ ಎಂಬ ಆರೋಪಗಳಿಗೂ ಸಹ ಉತ್ತರಿಸಿರುವ ಅವರು, ಇಂದಿನ ದೃಶ್ಯ ಮಾಧ್ಯಮ ಹಾಗೂ ಬಹು ಸಂವಹನ ಚಾನಲ್’ಗಳ ಬದಲಾದ ಉಪಸ್ಥಿತಿಯ ಬಗ್ಗೆ ಒತ್ತಿ ಹೇಳಿದ್ದಾರೆ.
ಮೊದಲು ಮಾಧ್ಯಮಗಳು ಮುಖರಹಿತವಾಗಿದ್ದವು. ಮಾಧ್ಯಮದಲ್ಲಿ #Media ಯಾರು ಬರೆಯುತ್ತಿದ್ದಾರೆ, ಸಿದ್ಧಾಂತ ಏನು… ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ, ಇನ್ನು ಮುಂದೆ ಪರಿಸ್ಥಿತಿ ಹಾಗೆಯೇ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
Also read: ನಾಳೆ ಸಂಜೆವರೆಗೂ ಆದಿಉಡುಪಿಯಲ್ಲಿ ಬಾಳಗಾರು ಅಕ್ಷೋಭ್ಯ ರಾಮಪ್ರಿಯತೀರ್ಥರು
ಇಂದು ಮಾಧ್ಯಮಗಳು ಇಲ್ಲದೇ ಜನರ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಬಹುದಾಗಿದೆ. ಉತ್ತರಿಸಬೇಕಾದವರು ಮಾಧ್ಯಮಗಳಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಉತ್ತಮವಾಗಿ ವ್ಯಕ್ತಪಡಿಸಬಹುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post