ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್’ಗೆ 40 ಸೀಟು ಬರುವುದಿಲ್ಲ ಎಂದು ಮೋದಿ ಪ್ರಚಾರ ಮಾಡುತ್ತಿದ್ದಾನೆ. ಅವನು ನನಗಿಂತಲೂ ವಯಸ್ಸಿನಲ್ಲಿ ಸಣ್ಣವ. ಒಂದು ವೇಳೆ 40ಕ್ಕಿಂತಲೂ ಹೆಚ್ಚು ಸೀಟು ಕಾಂಗ್ರೆಸ್’ಗೆ ಬಂದರೆ ದೆಹಲಿಯ ವಿಜಯ್ ಚೌಕದಲ್ಲಿ ಅವನು ನೇಣು ಹಾಕಿಕೊಳ್ಳುತ್ತಾನಾ? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಿದೆ. ಆದರೆ ಆಗ ಅವನು(ಮೋದಿ) ಹುಟ್ಟೇ ಇರಲಿಲ್ಲ. ಹೀಗಿರುವಾಗಿ ಕಾಂಗ್ರೆಸ್ ಬಗ್ಗೆ ಮಾತನಾಡಲು ಅವನಿಗೆ ಯಾವ ನೈತಿಕತೆಯಿದೆ ಎಂದು ಏಕವಚನದಲ್ಲೇ ಈ ದೇಶದ ಪ್ರಧಾನಿಯವರನ್ನು ನಿಂದಿಸಿದ್ದಾರೆ.
ರಾಜೀವ್ ಗಾಂಧಿ ಸತ್ತು ಮೂರು ದಶಕದ ಮೇಲೆ ಆಯಿತು. ಈ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾನೆ. ಯಾಕೆಂದರೆ ಬೇರೆ ಮಾತನಾಡಲು ಬಿಜೆಪಿಗೆ ವಿಷಯವೇ ಇಲ್ಲ ಎಂದು ಕಿಡಿ ಕಾರಿದ್ದಾರೆ.
Discussion about this post