ವಾಘಾ ಗಡಿ: ತನ್ನ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸಂಜೆ 5.20ಕ್ಕೆ ಭಾರತಕ್ಕೆ ಹಸ್ತಾಂತರ ಮಾಡಿದ ಎಂಬ ಮಾಹಿತಿಗೆ ಭಿನ್ನ ಮಾಹಿತಿಗಳು ಬರಲಾರಂಭಿಸಿದ್ದು, 7.30 ಗಂಟೆಯವರೆಗೂ ಹಸ್ತಾಂತರ ಮಾಡಿಲ್ಲ ಎಂದು ವರದಿಯಾಗಿದೆ.
ಇತ್ತೀಚಿನ ಮಾಹಿತಿಗಳ ಅನ್ವಯ ಅಭಿನಂದನ್ ಅವರನ್ನು ಹಸ್ತಾಂತರ ಮಾಡಲು ವಿಳಂಬ ಮಾಡುತ್ತಿರುವ ಪಾಕ್ ಸೇನೆ, ರಾಜತಾಂತ್ರಿಕ ವಿಚಾರಗಳ ಸಂಬಂಧ ಅಮೆರಿಕಾ, ಚೀನಾ ಹಾಗೂ ಆಸ್ಟ್ರೇಲಿಯಾದೊಂದಿಗೆ ಮಾತನಾಡಬೇಕು. ಆನಂತರವಷ್ಟೆ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿದೆ ಎನ್ನಲಾಗಿದೆ.
ಈ ಮೊದಲು ಸಂಜೆ 5.20ಕ್ಕೆ ಹಸ್ತಾಂತರ ಮಾಡಲಾಗಿದ್ದು, 6.15ರ ವೇಳೆಗೆ ಪ್ರಕ್ರಿಯೆ ಮುಕ್ತಾಯವಾಗಿದೆ ಎಂದು ವಾಘಾ ಗಡಿಯಿಂದ ಎಜೆನ್ಸಿಗಳು ವರದಿ ಮಾಡಿದ್ದವು. ಆದರೆ, ಈ ಕ್ಷಣದ ಮಾಹಿತಿಯಂತೆ ಹಸ್ತಾಂತರಕ್ಕೆ ಪಾಕ್ ವಿಳಂಬ ಮಾಡುತ್ತಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

















