ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ವೀರ ಯೋಧರಂತೆ ಹೋರಾಡ ಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.
ಶಿವಮೊಗ್ಗ ನಗರದಲ್ಲಿ ಬಿಜೆಪಿಯ ಬೂತ್ ಮಟ್ಟದ ಮತ್ತು ಪೇಜ್ ಪ್ರಮುಖರ ಬೃಹತ್ ಕಾರ್ಯಕರ್ತರ ಸಭೆ ನಡೆಯಿತು.
ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆಯಲ್ಲಿ ಮೋದಿಯವರನ್ನು ಪ್ರಧಾನ ಮಂತ್ರಿಗಳನ್ನಾಗಿಸಲು ಸಂಕಲ್ಪ ಮಾಡಲಾಯಿತು#Shivamogga #Shimoga pic.twitter.com/27J7m6HiVs— Chowkidar B Y Raghavendra (@BYRBJP) March 24, 2019
ಶಿವಮೊಗ್ಗ ನಗರ ಬಿಜೆಪಿಯ ಬೂತ್ ಮಟ್ಟದ ಮತ್ತು ಪೇಜ್ ಪ್ರಮುಖರ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅಲ್ಲಿ ನಮ್ಮ 43 ಸೈನಿಕರ ಹತ್ಯೆ ಮಾಡಿದ ಉಗ್ರರ ಕ್ರಮಕ್ಕೆ ಪ್ರತಿಯಾಗಿ ಪಾಕಿಸ್ಥಾನ ಕ್ಕೆ ನುಗ್ಗಿ 200 ಉಗ್ರರ ಹತ್ಯೆ ಮಾಡಿದ ಮೋದಿ ಸರ್ಕಾರದ ಕ್ರಮ ನಿಮ್ಮ ಮುಂದೆ ಇದೆ. ಅದರಂತೆ ಶಿವಮೊಗ್ಗ ನಗರದ ಬೂತ್ ಪೇಜ್ ಪ್ರಮುಖರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ವೀರಯೋಧರಂತೆ ಹೋರಾಡಬೇಕಿದೆ ಎಂದರು.
ನರೇಂದ್ರ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರಲು ಬಿ.ವೈ. ರಾಘವೇಂದ್ರ ಅವರನ್ನು ಆರಿಸಿ ಕಳಿಸಬೇಕಿದೆ. ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಚುನಾವಣೆ ಯಲ್ಲಿ ಮೈತ್ರಿ ಸರ್ಕಾರ ದ ಕಾಂಗ್ರೆಸ್-ಜೆಡಿಎಸ್ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳು ಸಿಗದೆ ಒದ್ದಾಡುತ್ತಿವೆ. ದೇವೇಗೌಡರು-ಸಿದ್ದರಾಮಯ್ಯ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದಾರೆ. ಅದು ಮುಂದೆ ತಿಳಿಯಲಿದೆ ಎಂದರು.
ಬಿಜೆಪಿ ಮುಖಂಡ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮುಂದೆ ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಹಾಲಿ ಸರ್ಕಾರ ಇರುವ ಸಾದ್ಯತೆ ಇರುವುದಿಲ್ಲ. ಆ ಸಮ್ಮಿಶ್ರ ಸರ್ಕಾರ ತೆಗೆಯಲು ಲೋಕಸಭಾ ಚುನಾವಣೆ ದಿಕ್ಸೂಚಿ ಆಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರು ಎಸ್. ರುದ್ರೇಗೌಡ, ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್, ನಗರ ಬಿಜೆಪಿ ಅಧ್ಯಕ್ಷ ನಾಗರಾಜ್, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಎಸ್.ಎಸ್. ಜ್ಯೋತಿಪ್ರಕಾಶ್ ಹಾಜರಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post